Index   ವಚನ - 168    Search  
 
ಧ್ವನಿಯ ತೋರಲು, ಆ ಧ್ವನಿಯ ಮರೆಯಲ್ಲಿ ಹುಟ್ಟಿದ ಮದ್ಗುರು ಬಸವಣ್ಣಂಗೆ ಶಿವಸುಖವಾಯಿತ್ತು ಬಸವಾ. ಆ ಧ್ವನಿಯಡಗಿ ಅಪ್ರತಿಮ ಸಂಗ ನಿರ್ಮಲಾಕಾರವಾಯಿತ್ತಯ್ಯಾ ಎನಗೆ. ಪ್ರಣವಸ್ವರೂಪ ಬಸವನ ಕಂಡ ಬಳಿಕ ಆನು ಬಸವನ ಶಿಶುವಾದೆನಯ್ಯಾ ಸಂಗಯ್ಯಾ.