Index   ವಚನ - 175    Search  
 
ನಮ್ಮ ಹಂಗಿಗನಲ್ಲ ಬಸವಯ್ಯನು. ನಮ್ಮ ಸಂಗಿಗನಲ್ಲ ಬಸವಯ್ಯನು. ನಮ್ಮ ಇರದವನಲ್ಲ ಬಸವಯ್ಯನು. ನಮ್ಮ ಪರದವನಲ್ಲ ಬಸವಯ್ಯನು. ಪ್ರಸಾದವೇದ್ಯ ಶರಣ ಬಸವಯ್ಯನು. ಪ್ರಸನ್ನಕಾಯವಾದನಯ್ಯ ಸಂಗಯ್ಯಾ.