Index   ವಚನ - 177    Search  
 
ನಾಡನಾಳ ಹೋದರೆ, ಆ ನಾಡು ಆಳುವ ಒಡೆಯಂಗೆ ನಾಡೇ ಹಗೆಯಾಯಿತ್ತು. ಹಗೆಯಳಿದು ನಿಸ್ಸಂಗವಾಯಿತ್ತು. ನಿಸ್ಸಂಗ ವೇದ್ಯವಾಗಿ ಸಂಗಯ್ಯನಲ್ಲಿ ಮುಕ್ತಳಾದೆನು ನಾನು.