Index   ವಚನ - 193    Search  
 
ಪಯಣವಿಲ್ಲದೆ ಗಮನವ ಕಂಡವರುಂಟೆ? ಗತಿಯಿಲ್ಲದೆ ಪೂಜೆಯ ಮಾಡಿದವರುಂಟೆ? ಹೊಲನಿಲ್ಲದೆ ಫಲವನುಂಡವರುಂಟೆ? ಮೃಗವಿಲ್ಲದೆ ಬೇಂಟೆಯನಾಡಿದವರುಂಟೆ? ಅರಸಿಯಿಲ್ಲದೆ ಅರಸಾದವರುಂಟೆ? ಸಂಗಯ್ಯ, ಮುಖವಿಲ್ಲದ ಪ್ರಸಾದವನುಂಡವರುಂಟೆ?