ಮನವಿಲ್ಲದೆ ತನುವ ಕುಡಹೋದರೆ
ಆ ತನು ಮನದಲ್ಲಿ ನಿಂದಿತ್ತು,
ಮನ ತನುವಿನ ಸಂಗವಡಗಲು
ಉಭಯ ಸಮಾಧಿ ಸಾಧ್ಯವಾಯಿತ್ತಯ್ಯ.
ಹಿರಿಯತನದ ರೂಪ ಕಾಣಲು
ಪರಿಪರಿಯ ಭ್ರಮೆಯಡಗಿತ್ತಯ್ಯ.
ಇಷ್ಟ ಪ್ರಾಣದ ಭಾವದ ಸೂತಕ ಹಿಂಗಲು
ಆನು ಸಂಗಯ್ಯನಲ್ಲಿ ಬಸವನನುಭವಿಯಾದೆನಯ್ಯ.
Art
Manuscript
Music
Courtesy:
Transliteration
Manavillade tanuva kuḍahōdare
ā tanu manadalli nindittu,
mana tanuvina saṅgavaḍagalu
ubhaya samādhi sādhyavāyittayya.
Hiriyatanada rūpa kāṇalu
paripariya bhrameyaḍagittayya.
Iṣṭa prāṇada bhāvada sūtaka hiṅgalu
ānu saṅgayyanalli basavananubhaviyādenayya.