Index   ವಚನ - 240    Search  
 
ಮಾಯದ ಮನದ ಕರ್ಮದ ಹಂಗ ಹರಿದು ಅನುಭವವ ನನ್ನಲ್ಲಿಯಡಗಿಸಿ, ನಾನು ನಮ್ಮಯ್ಯನಲ್ಲಿ ನಮಸ್ಕಾರವನಳಿದೆನಯ್ಯ. ನಮಸ್ಕಾರವನಳಿದು ನಮೋ ವಿಶ್ವರೂಪಳಾದೆನಯ್ಯ ಸಂಗಯ್ಯ.