Index   ವಚನ - 242    Search  
 
ಮುಕ್ತಿಯನಳಿದು ನಿರ್ಮುಕ್ತಳಾದ ಕಾರಣ ಮುಕ್ತಿಯಿಲ್ಲವಯ್ಯಾ ಬಸವಯ್ಯಾ ಎನಗೆ. ಸಂಗ ನಿಸ್ಸಂಗದವಳಾದ ಕಾರಣ ಎನಗೆ ಸಂಗದ ಸಂಗವಿಲ್ಲವಯ್ಯಾ ಬಸವಯ್ಯಾ. ನನಗೇತರ ಪರಿಣಾಮದ ಕೂಟಪ್ರಭೆ? ವಿರೂಪಾಕ್ಷಸಂಗವನನುಭವಿಸಿದೆನಯ್ಯಾ ಬಸವಯ್ಯಾ. ಸಂಗಯ್ಯಾ, ಬಸವ ವರ ಪ್ರಣವಸ್ವರೂಪನಾಯಿತ್ತು.