ಮುನ್ನಲೊಂದು ಶಿಶು ಹುಟ್ಟಿತ್ತು.
ಆ ಶಿಶುವಿನ ಕೈಯಲೊಂದು ಮಾಣಿಕ್ಯವ ಕೊಡಲು,
ಆ ಮಾಣಿಕ್ಯ ಹಲವು ವರ್ಣವನೆ ತೋರಿ
ಬಯಲನೆ ನೆಮ್ಮಿತ್ತು.
ಮಾಣಿಕ್ಯದ ಕುರುಹಿಲ್ಲ, ಬಯಲಿಂಗೆ ಬಣ್ಣವಿಲ್ಲ,
ಸಂಗಯ್ಯನಲ್ಲಿ ಹೆಸರಳಿದ ಬಸವಂಗೆ.
Art
Manuscript
Music
Courtesy:
Transliteration
Munnalondu śiśu huṭṭittu.
Ā śiśuvina kaiyalondu māṇikyava koḍalu,
ā māṇikya halavu varṇavane tōri
bayalane nem'mittu.
Māṇikyada kuruhilla, bayaliṅge baṇṇavilla,
saṅgayyanalli hesaraḷida basavaṅge.