Index   ವಚನ - 258    Search  
 
ಮೌಕ್ತಿಕದ ಮಂಟಪ ಕಟ್ಟಿ. ಮನೆಯೊಳಗೆ ತೋರಣಗಟ್ಟಿದವು. ಮಾಣಿಕ್ಯದ ವರ್ಣದ ತೋರಣವು. ಆ ಮಾಣಿಕ್ಯದ ವರ್ಣದ ತೋರಣವ ಕಂಡು, ಆ ತೋರಣವ ಸರಗೊಳಿಸಿ ಸರದ ಮುಂದೆ ಮಧ್ಯಸ್ವರೂಪವಾಗಿ ಆನು ನಿಜ ಪರಿಣಾಮಿಯಾದೆನಯ್ಯ ಸಂಗಯ್ಯ.