Index   ವಚನ - 268    Search  
 
ಶಿವತತ್ವವ ಕಾಣದ ಮುನ್ನ ಅನುಭವತತ್ವವ ಕಾಣಲಾಯಿತ್ತಯ್ಯಾ ಬಸವಾ. ಆನು ಅನುಭವಶೀಲವನರಿದು, ಮುಕ್ತ್ಯಂಗನೆಯಾದೆನಯ್ಯಾ ಬಸವಾ. ಆನು ಮುಕ್ತ್ಯಂಗನೆಯಾಗಿ ನಿಜದಲ್ಲಿ ನಿಲಲು, ಬಸವನ ಕುರುಹು ಕಾಣಬಂದಿತ್ತು. ಆ ಬಸವನ ಕುರುಹ ತಿಳಿದು ಇಷ್ಟಮೂರ್ತಿಯ ನಿಷ್ಠೆಯನರಿವೆನಯ್ಯಾ ಸಂಗಯ್ಯಾ.