Index   ವಚನ - 277    Search  
 
ಸ್ವಯಸಮರಸದ ಇರವನಂಗವಿಸಿ ತತ್ತ್ವವಡಗಿ ನಿಃಶೂನ್ಯವ ತಿಳಿದು ನಿಃಶೂನ್ಯ ಶಬ್ದವ ಕಂಡು ನಿಃಶಬ್ದ ಶಬ್ದವಾಗಿ ಶಬುದಾಚಾರವನರಿದೆನಯ್ಯ. ಅರಿವ ಮರದು ಕುರುಹಳಿದು ವಿಚಾರ ಮನ ನಷ್ಟವ ಮಾಡಿದೆನಯ್ಯ. ನಷ್ಟದ ಮಾತನೊಂದು ರೂಪಮಾಡಿ ಆ ರೂಪು ಉರಿಯುಂಡಿತ್ತಯ್ಯ ಸಂಗಯ್ಯ.