Index   ವಚನ - 281    Search  
 
ಹುಟ್ಟಿಲ್ಲದ ಭೂಮಿಯಲ್ಲಿ ಹುಟ್ಟಿದೆ ನಾನು. ನಾ ಹುಟ್ಟಿ ಕಾಯವಸ್ಥಿರವಾಗಿ ಅಸ್ಥಿರ ಸುಸ್ಥಿರವಾಗಿ ಆನು ಅನುಭವದಾಯಕಳಾದೆನು. ಆನು ಸುಖದುಃಖವ ಕಳೆದು, ಅನುಭವಿಯಾದೆನಯ್ಯ ಸಂಗಯ್ಯ.