Index   ವಚನ - 282    Search  
 
ಹುಟ್ಟುಗೆಟ್ಟೆ ನಾನು, ತೊಟ್ಟ ಬಿಟ್ಟ ನಾನು, ಕಟ್ಟಕ್ಕರಿನ ಸುಖವನಂಗವಿಸಿ ನಿರಂಗಿಯಾದೆ ನಾನು. ನಿನ್ನ ಬಯಲುಹನಳಿದೆ ನಾನು, ನನ್ನ ಕುರುಹ ಕಳೆದೆ ನಾನು. ಎಸವ ಬಸವನ ಬೆಸುಗೆಯ ಬಿಟ್ಟೆ; ಸಂಗಯ್ಯನಲ್ಲಿ ರೂಪವಳಿದ ಹೆಣ್ಣು ನಾನು.