Index   ವಚನ - 7    Search  
 
ಎನ್ನ ಸತ್ಕ್ರೀ ಸಂಗನಬಸವಣ್ಣ ಎನ್ನ ಸುಜ್ಞಾನವೇ ಚೆನ್ನಬಸವಣ್ಣ ಈ ಎರಡರ ಏಕೀಭಾವವೇ ಪ್ರಭುವೆ ನೀವು ನೋಡಾ! ನಿಮ್ಮೆಲ್ಲರ ನೈಷ್ಠಯೇ ಮಡಿವಾಳಯ್ಯನು! ಇಂತೀ ಚತುರ್ವಿಧವೆನಗೆ ಬೇಕಾದ ಕಾರಣ ಇಷ್ಟಲಿಂಗದ ಸೇವೆ ಚರಲಿಂಗದ ದಾಸೋಹವೆಂಬುದನು ಬಸವಣ್ಣಪ್ರಿಯ ಚಂದೇಶ್ವರಲಿಂಗದಲ್ಲಿ ಚೆನ್ನಬಸವಣ್ಣನ ಕೈಯಲ್ಲಿ ಎನಗೆ ತಿಳುಹಿಕೊಡಾ ಪ್ರಭುವೇ!