Index   ವಚನ - 17    Search  
 
ಗುರುವನರಿದಲ್ಲಿ ಬ್ರಹ್ಮನ ಕಲ್ಪ ಹರಿವುದು. ಲಿಂಗವನರಿದಲ್ಲಿ ವಿಷ್ಣುವಿನ ಸ್ಥಿತಿಯ ಹರಿವುದು. ಜಂಗಮವನರಿದಲ್ಲಿ ರುದ್ರನ ಲಯಕ್ಕೆ ಸಿಕ್ಕ. ಈ ತ್ರಿವಿಧ ಭೇದವನರಿದು, ತನ್ನ ತಾನರಿದಲ್ಲಿ ಬಂಧ ಮೋಕ್ಷ ಕರ್ಮ ಒಂದೂ ಇಲ್ಲ. ಚೆನ್ನಬಸವಣ್ಣಪ್ರಿಯ ಚಂದೇಶ್ವರಲಿಂಗವನರಿದಲ್ಲಿ.