Index   ವಚನ - 18    Search  
 
ಗುರುವನರಿತು ಮಾಡುವಲ್ಲಿ ಅಹಂಕಾರವ ಮರೆದು ಮಾಡಬೇಕು. ಲಿಂಗವನರಿತು ಮನಮುಟ್ಟುವಲ್ಲಿ ಪ್ರಕೃತಿ ತಲೆದೋರದಿರಬೇಕು ಜಂಗಮವನರಿತು ಮುಟ್ಟಿ ಪೂಜಿಸುವಲ್ಲಿ ಅರ್ಥ ಪ್ರಾಣ ಅಭಿಮಾನ ಈ ಮೂರರಲ್ಲಿ ನಿಶ್ಚಯವಾಗಿರಬೇಕು ಸಂಗನಬಸವಣ್ಣಪ್ರಿಯ ಚಂದೇಶ್ವರಲಿಂಗವನರಿಯ ಬಲ್ಲಡೆ.