Index   ವಚನ - 23    Search  
 
ಗುರುವಿಂಗೆ ಮೋಹಿತವಾಗಿ ಮಾಡುವಲ್ಲಿ ಮನ ಲಿಂಗವ ಮುಟ್ಟದಿರಬೇಕು. ಲಿಂಗಕ್ಕೆ ಮೋಹಿತವಾಗಿ ಮಾಡುವಲ್ಲಿ ಮನ ಜಂಗಮವ ಮುಟ್ಟದಿರಬೇಕು. ಜಂಗಮಕ್ಕೆ ಮೋಹಿತವಾಗಿ ಮಾಡುವಲ್ಲಿ ಮೂರು ಮಲತ್ರಯದ ಮುಟ್ಟದಿರಬೇಕು. ಆ ಘನವನರಿತು ಮಾಡುವಲ್ಲಿ ಸಂಗನಚೆನ್ನಬಸವಣ್ಣಪ್ರಿಯ ಚಂದೇಶ್ವರಲಿಂಗಕ್ಕೆ ಅರ್ಪಿತ.