Index   ವಚನ - 24    Search  
 
ಗುರು ಶಿಷ್ಯಂಗೆ ಬೋಧಿಸುವಲ್ಲಿ ತನ್ನನಳಿದು ಲಿಂಗವ ತೋರಿಸಬೇಕು. ಲಿಂಗದ ಸಂಗ ನೆನಹಾದಲ್ಲಿ ಆ ಲಿಂಗಕ್ಕೆ ಉಂಬ ಬಾಯಿ ಜಂಗಮವಾದ ಕಾರಣ, ಆ ಜಂಗಮಲಿಂಗದ ದಾಸೋಹದಿಂದ ಬೇರೊಂದಂಗವಿಲ್ಲ. ಸಂಗನಚೆನ್ನಬಸವಣ್ಣಪ್ರಿಯ ಚಂದೇಶ್ವರಲಿಂಗವು ಹಿಂಗದ ಭಾವ ಕಾಣಾ ಮಡಿವಾಳಯ್ಯಾ.