Index   ವಚನ - 34    Search  
 
ನಾನೆಂದು ಇಹನ್ನಬರ ಗುರುಪೂಜೆಯ ಮಾಡಬೇಕು. ನಾನೆಂದು ಇಹನ್ನಬರ ಲಿಂಗಪೂಜೆಯ ಮಾಡಬೇಕು. ನಾನೆಂದು ಇಹನ್ನಬರ ಜಂಗಮಪೂಜೆಯ ಮಾಡಬೇಕು. ನಾ ನೀನೆಂಬುಭಯವಳಿಯೆ ಚೆನ್ನಬಸವಣ್ಣಪ್ರಿಯ ಚಂದೇಶ್ವರಲಿಂಗವ ಏನೂ ಎನಲಿಲ್ಲ.