ಭಾವ ಶುದ್ಧವಾಗಿಪ್ಪುದೇ ಗುರುಪೂಜೆ
ಜ್ಞಾನಶುದ್ಧವಾಗಿಪ್ಪುದೇ ಲಿಂಗಪೂಜೆ.
ತ್ರಿಕರಣ ಶುದ್ಧವಾಗಿ ತ್ರಿವಿಧ ಮಲದಲ್ಲಿ
ನಿಶ್ಚಯವಾಗಿ ನಿಂದುದೇ ಜಂಗಮಪೂಜೆ.
ಇಂತೀ ತ್ರಿವಿಧ ಭೇದದಲ್ಲಿ
ತ್ರಿವಿಧಾರ್ಪಣವ ಅರ್ಪಿಸಿ ನಿಂದುದೇ
ಚಂದೇಶ್ವರಲಿಂಗಕ್ಕೆ ಅರ್ಪಿತ, ಮಡಿವಾಳಯ್ಯಾ.
Art
Manuscript
Music
Courtesy:
Transliteration
Bhāva śud'dhavāgippudē gurupūje
jñānaśud'dhavāgippudē liṅgapūje.
Trikaraṇa śud'dhavāgi trividha maladalli
niścayavāgi nindudē jaṅgamapūje.
Intī trividha bhēdadalli
trividhārpaṇava arpisi nindudē
candēśvaraliṅgakke arpita, maḍivāḷayyā.