Index   ವಚನ - 13    Search  
 
ತಾನು ಈಶನೆಂಬುದನು ತಾನರಿದು, ಮಾನೀಶನೆಂಬುದನು ತಾನರಿದು. ತಾನೆ ತಾನಾಗುವ ಸಕೀಲವನರಿಯದೆ ಧ್ಯಾನಧಾರಣಸಮಾಧಿ ಯೋಗಾಂಗವೆಂಬ ಯೋಗಧ್ಯಾನದಿಂದ ಅರಿಯ[ಬ]ಹುದೆ ಸ್ವಯಂಭು[ವ]? ಯೋಗಿ ದೇಹರಹಿತ, ಈ ದೇಹವಿಡದೇ ವಿದೇಹಿಯಾಗುವ ಸಕೀಲಸಂಜ್ಞೆಯ ಅರಿಯಬಲ್ಲಂಥ ಗುರುವಿನ ಕೃಪೆ ದೊರಕೊಳ್ಳುವತನಕ ಮನದಿಂದಲರಿಯಲುಂಟೆ? ಗುರುವಿನ ಕೃಪೆ ದೊರಕೊಳ್ಳುವತನಕ ಮನದಿಂದಲರಿಯಲುಂಟೆ? ತನ್ನ ಘನವು ಆ ಮನವು ಮದಾವಸ್ಥೆಯಲ್ಲಿ ಮಗ್ನವಹುದಲ್ಲದೆ ಮಾಣದು ನೋಡಾ. ಅದು ಮೂರುಗುಣ, ಅದು ತ್ರಿಪುಟಿ ಮಾಯಾ. ಜಾಗ್ರತದಲ್ಲಿದ್ದ ವರ್ತನೆ ಸ್ವಪ್ನದಲ್ಲಿಲ್ಲ. ಸ್ವಪ್ನದಲ್ಲಿದ್ದ ವರ್ತನೆ ಸುಷುಪ್ತಿಯಲ್ಲಿಲ್ಲ. ಈ ಮನ ತಾನು ಹುಟ್ಟುಗುರುಡು ಮೊದಲಿಂಗೆ ಹುಸಿ ವಿಲಕ್ಷಣಾದಿ ಶಿವನೆತ್ತ, ಲಕ್ಷದಿಂದ ಅರಿಯಬೇಕೆಂಬ ಮನವೆತ್ತ, ಹೋಗುತ್ತ, ನೀನತ್ತ. ಈ ಮನಸು ತಾನು ಮೊದಲಿಂಗಲ್ಲದೆ ಹುಸಿಯೆಂದರಿಯದೆ ನದಿಯ ಸುಳಿಯಲ್ಲಿ ಬಿದ್ದ ಹುಳದಂತೆ ಮುಳುಗುತ್ತ ಏಳುತ್ತ ತಿರುಗುವವರಿಗೆಲ್ಲ ತನ್ನ ನಿಜವು ತನ್ನವೆಂದರ್ಥವಾಗುವುದೆ? ಅದು ತಮ್ಮ ಇಚ್ಫೆ. ಇದನರಿಯದೆ ಮನ ಸಮಾಧಿಯ ಮಾಡಬೇಕೆಂಬ ಮಹಾಗಣಂಗಳು ಇಂತಿವರಲ್ಲ. ಮಹಾಗಣಂಗಳು ಮಹಾಜ್ಞಾನಿಗಳು ಇಂತಿವರಲ್ಲ. ಮರ್ತ್ಯದಲ್ಲಿ ಎನ್ನದೊಂದು ವಂಶವೆಂದಾತ ನಮ್ಮ ವೀರ ಸದ್ಗುರು ಪರಂಜ್ಯೋತಿ ಮಹಾವಿರಕ್ತಿ.