Index   ವಚನ - 12    Search  
 
ಅಂಗದೊಳಗಿದ್ದ ಲಿಂಗವ ಕಾಣದೆ ಆಡುವ ಮಾನವನೆ ನನ್ನ ತತ್ಸಂಗಲೀಯವಾಗಿರೆ ನಾನಾ ಲಕ್ಷಗಳಿಂದ ನೀನು ಸುಖಿಸುವ ಸಕೀಲವರಿವನಲ್ಲಾ. ನಮ್ಮ ಗುರುವೆ ಅರುವೆಂಬ ಮರ್ಯಾದೆ ಆದಿಯಲ್ಲಿ ನಡೆದು ನಂಬಿದಕ್ಕೆ ಮುಂದೆ ನಾನು ಬೇಡಿದ ಪದಾರ್ಥಂಗಳ ಕೊಟ್ಟರೆ ನಿನ್ನಲ್ಲಿ ಇದ್ದದ್ದನ್ನೆಲ್ಲಾ ತೋರಿಕೊಡುವೆನೆಂದು ನುಡಿಯಲಾಗಿ, ಶಿಷ್ಯ ನಂಬುಗೆಯಿಂದ ನಿನ್ನ ಆಜ್ಞೆಗೆ ನಿಲ್ಲುವೆನೆಂದು ವಂದನೆಯ ಮಾಡಿ ವಂದಿಸಲು ಮನನಿರೂಪದಿಂದ ಅಂತರಂಗದೊಳಗಿದ್ದ ಮನಪ್ರಕಾಶವನು ತೋರಿ, ಥಳಥಳ ಮಾಯಾರೂಪಗಳನು ತೋರಿ ನಿಜವೆಂದು ಭಾವಿಸಿ ನಿರ್ಣಯಿಸಿಕೊಳ್ಳೆಂದು ಶಿಷ್ಯನ ಸತಿಯಂ ಕಂಡು ಕಾಮುಕನಾಗಿ ಗುರುಸೇವೆಯ ಮಾಡಿದರೆ ಮುಕ್ತರಾದೆವೆಂದು ನುಡಿದು ಮೆಚ್ಚಿಸಿಕೊಂಡು ಉಚ್ಚನರಕದೊಳು ಮುಳುಗುವ ಹುಚ್ಚರಿಗೆ ಬೆಚ್ಚುವುದೆ ಮಹಾನುಭಾವ? ಅನ್ಯಭಾವದಿ ಬಳಸುವ ಅನಾಚಾರಿಗೆ ತನ್ನ ಭಾವ ದೊರಕುವುದೊ? ದೊರಕದಯ್ಯಾ. ಚಿತ್ತೇ ತಾನಾದ ವರನಾಗನ ಗುರುವೀರನೆ ಪರಂಜ್ಯೋತಿ ಮಹಾವಿರಕ್ತಿ.