ಅನಾದಿಯಿಂದತ್ತಲಾದ ಅಂತರಾದಿಮಧ್ಯದಲ್ಲಿ
ನಿಜಸ್ವರೂಪ ನಿಃಕಲವಸ್ತು ಜಗಲೀಲಾಭಾವಿಯಾಗಿ
ತ್ರಿಗುಣ್ಮಾತಕವಾದ ಭೇದಪೂರ್ವಕ ಮುಂತಾದ
ಷಡ್ದರ್ಶನದ ವಿವರಂಗಳಿಗೆ
ಶೈವ ವೈಷ್ಣವ ಉಭಯಂಗಳಲ್ಲಿ ಶೈವವಾರು ವೈಷ್ಣವವಾರು.
ಇಂತೀ ಉಭಯದಲ್ಲಿ ಅಡಗುವ ಗುಣ ವಿವರ:
ಶೈವಕ್ಕೆ ಮೂರು, ವೈಷ್ಣವಕ್ಕೆ ಮೂರು.
ಉಭಯನಾಮ ಕುಲಲಯವಹಲ್ಲಿ ಶೈವಕ್ಕೆ ದಹನ, ವೈಷ್ಣವಕ್ಕೆ ಸಮಾಧಿ.
ಇದು ಅಕ್ಷಯ ಲಕ್ಷ ನಿರೀಕ್ಷಣೆಯಿಂದತ್ತಣ ಮಾತು.
ಅಂದಿನಿಂದ ಇತ್ತಣ ವಿವರ:
ನಾಲ್ಕು ಲಕ್ಷವು ಮೂವತ್ತೈರಡನೆಯ ಸಹಸ್ರ ಸಂವತ್ಸರಂಗಳಿಂದ
ಈಚೆಯಾದ ಸರ್ವಪ್ರಮಾಣಿಗೆ ಏಕಾದಶಗುಣ.
ಅವತಾರಕ್ಕೆ ಸಮಾಧಿ, ದಶ ಅವತಾರಕ್ಕೆ ದಹನ.
ಇಂತೀ ಭೇದಂಗಳು ಆವರ್ಚಿಸಿ ನಡೆದು
ಕಲಿಯುಗದ ಕಡೆಯಲ್ಲಿ ಅನಾದಿಪರಮೇಶ್ವರನ
ಅಪರಾವತಾರ ಭೇದರೂಪು ಬಸವಣ್ಣನಾಗಿ
ಅಭೇದ್ಯರೂಪು ಚೆನ್ನಬಸವಣ್ಣನಾಗಿ ವೀರಶೈವಸಿದ್ಧಾಂತವೆಂಬುದು ಲಕ್ಷಿಸಿ
ಷಡ್ದರ್ಶನಕ್ಕೆ ಸ್ಥಾಪನಾಚಾರ್ಯನಾಗಿ
ವಿಶ್ವಕ್ಕೆ ಚಕ್ಷುವಾಗಿ, ಆಚಾರಕ್ಕೆ ಅಂಗವಾಗಿ
ಶಿಕ್ಷೆ ದೀಕ್ಷೆ ಮೋಕ್ಷಕ್ಕೆ ಮುಮುಕ್ಷುವಾಗಿ
ಚತುರ್ಗುಣ ಆಚಾರಕ್ಕೆ ಅರಸಾಗಿ ಸರ್ವಗುಣಸಂಬಂಧಿ ನೀನಾದೆಯಲ್ಲಾ
ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವೆ, ನಿನ್ನ ಲೀಲಾಭಾವ.
Art
Manuscript
Music
Courtesy:
Transliteration
Anādiyindattalāda antarādimadhyadalli
nijasvarūpa niḥkalavastu jagalīlābhāviyāgi
triguṇmātakavāda bhēdapūrvaka muntāda
ṣaḍdarśanada vivaraṅgaḷige
śaiva vaiṣṇava ubhayaṅgaḷalli śaivavāru vaiṣṇavavāru.
Intī ubhayadalli aḍaguva guṇa vivara:
Śaivakke mūru, vaiṣṇavakke mūru.
Ubhayanāma kulalayavahalli śaivakke dahana, vaiṣṇavakke samādhi.
Idu akṣaya lakṣa nirīkṣaṇeyindattaṇa mātu.
Andininda ittaṇa vivara:
Nālku lakṣavu mūvattairaḍaneya sahasra sanvatsaraṅgaḷinda
īceyāda sarvapramāṇige ēkādaśaguṇa.
Avatārakke samādhi, daśa avatārakke dahana.
Intī bhēdaṅgaḷu āvarcisi naḍedu
kaliyugada kaḍeyalli anādiparamēśvarana
aparāvatāra bhēdarūpu basavaṇṇanāgi
Abhēdyarūpu cennabasavaṇṇanāgi vīraśaivasid'dhāntavembudu lakṣisi
ṣaḍdarśanakke sthāpanācāryanāgi
viśvakke cakṣuvāgi, ācārakke aṅgavāgi
śikṣe dīkṣe mōkṣakke mumukṣuvāgi
caturguṇa ācārakke arasāgi sarvaguṇasambandhi nīnādeyallā
cannabasavaṇṇapriya bhōgamallikārjunaliṅgave, ninna līlābhāva.