Index   ವಚನ - 41    Search  
 
ತರುವಿನ ಕಿಚ್ಚಿನಂತೆ, ಅರಗಿನ ಉರಿಯ ಯೋಗದಂತೆ ಮಾಣಿಕ್ಯದ ಮೈಸಿರಿಯಂತೆ ಅಪ್ಪು ಹೆಪ್ಪಳಿಯದೆ ಮೌಕ್ತಿಕವಾದಂತೆ ಕರ್ಪುರದ ಘಟ್ಟದಲ್ಲಿ ಕಿಚ್ಚು ಹುಟ್ಟುತಲೆ ದರ್ಪಗೆಡುವಂತೆ ಅರಿವು ತಲೆದೋರಿದಲ್ಲಿ ಇಂದ್ರಿಯ ನಷ್ಟವಪ್ಪುದು ಸ್ವಾನುಭಾವಾತ್ಮಕನ ಸನ್ನದ್ಧ. ಇಂತೀ ಉಭಯಸ್ಥಲದ ಭೇದ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದಲ್ಲಿ.