ತ್ರಿವಿಧವ ಮಲವೆಂದರಿತು ತನ್ನ ಸುಖಕ್ಕೋಸ್ಕರವಾಗಿ ವಸ್ತುವಿನಿಂದ
ನಿರ್ಮಲವಾಯಿತ್ತೆಂದು ಮುಟ್ಟಬಹುದೆ?
ಲಿಂಗಭೋಗೋಪಭೋಗಂಗಳೆಂದು ಬಿಟ್ಟ
ನಿರ್ಮಾಲ್ಯವನರ್ಪಿಸಬಹುದೆ?
ಇಂತಿವನರಿದು ಅರ್ಪಿಸುವಲ್ಲಿ ಸಲ್ಲದೆಂಬುದ ತಾನರಿತು
ಮತ್ತೆ ಸಲುವುದೆಂಬಲ್ಲಿ ಅನರ್ಪಿತ ಅರ್ಪಿತವುಂಟೆ?
ಇಂತಿವ ದೃಷ್ಟದಿಂದ ಲಕ್ಷಿತನಾಗಿ ಮುಟ್ಟುವ ತೆರನ
ನೀವೆ ಬಲ್ಲಿರಿ ನಾವರಿಯೆವು.
ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವೆ ಬಲ್ಲ.
Art
Manuscript
Music
Courtesy:
Transliteration
Trividhava malavendaritu tanna sukhakkōskaravāgi vastuvininda
nirmalavāyittendu muṭṭabahude?
Liṅgabhōgōpabhōgaṅgaḷendu biṭṭa
nirmālyavanarpisabahude?
Intivanaridu arpisuvalli salladembuda tānaritu
matte saluvudemballi anarpita arpitavuṇṭe?
Intiva dr̥ṣṭadinda lakṣitanāgi muṭṭuva terana
nīve balliri nāvariyevu.
Cannabasavaṇṇapriya bhōgamallikārjunaliṅgave balla.