Index   ವಚನ - 46    Search  
 
ಧರೆ ಜಲ ಅನಲ ಅನಿಲ ಇವು ಮುಂತಾದುವಕ್ಕೆ ಅಳಿವುದಕ್ಕೆ ಉಳಿವುದಕ್ಕೆ ಆತ್ಮಭೇದವಾವುದು? ಶ್ರುತಿ ಮುಂತಾದ ತರ್ಕಂಗಳಿಂದ ಹೊತ್ತು ಹೋರಿಹೆನೆಂದಡೆ ರಥದ ಕೀಲಿನಂತೆ ಮಾತಿಗೆ ಮಾತುಂಟು. ಪೃಥ್ವಿಯ ಮೇಲಣ ನದಿ ತಟಾಕ ಅಪ್ಪುಮಯವೆಲ್ಲವು ಸಿಂಧುವಿನ ತಪ್ಪಲಿಗೆ ಎಯ್ದುವಂತೆ ಇದು ವಸ್ತುಮಯದ ಹಾಹೆ. ಈ ಗುಣ ಏಕವಸ್ತುವಿನ ನಿಜ. ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವಲ್ಲದಿಲ್ಲಾ ಎಂಬ ಮುಂಡಿಗೆ.