Index   ವಚನ - 45    Search  
 
ದೊರಕುವನ್ನಕ್ಕರ ನಿಸ್ಪೃಹ. ದೊರಕಿದ ಮತ್ತೆ ಸಂಸಾರಿಯೆ? ಇಂತೀ ಉಭಯವನರಿಯದೆ ಪೂಜಿಸಿಕೊಂಬ ಹಿರಿಯರ ನಾನರಿದೆ, ತ್ರಿವಿಧವೆಂಬ ಮಾರಿಯ ಮುಂದೆ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವು ಅರಿದಹನೆಂದು.