Index   ವಚನ - 49    Search  
 
ನ ಎಂಬಕ್ಷರದ ಭೇದ ಜನನನಾಸ್ತಿಯಾದ ವಿವರ. ಮ ಎಂಬಕ್ಷರದ ಭೇದ ಮರಣನಾಸ್ತಿಯಾದ ವಿವರ. ಶಿ ಎಂಬಕ್ಷರದ ಭೇದ ಸ್ವೀಕರಣೆನಾಸ್ತಿಯಾದ ವಿವರ. ವ ಎಂಬಕ್ಷರದ ಭೇದ ವಕಾರ ನಾಸ್ತಿಯಾಗಿ ಸಾಕಾರವಳಿದ ಭೇದ. ಯ ಎಂಬಕ್ಷರದ ಭೇದ ತತ್ವಮಸಿಯೆಂಬ ಭಿತ್ತಿಯ ಮೆಟ್ಟದೆ ಉತ್ಪತ್ಯ ಸ್ಥಿತಿ ಲಯವೆಂಬ ತ್ರಿವಿಧವ ಮುಟ್ಟದೆ ಅದು ನಿಶ್ಚಯವಾದಲ್ಲಿ ಪಂಚಾಕ್ಷರಿಯ ಭೇದ. ಇಂತೀ ಭೇದಂಗಳಲ್ಲಿ ಜಪಧ್ಯಾನವ ಧ್ಯಾನಿಸಿ ಇಷ್ಟ ಕಾಮ್ಯ ಮೋಕ್ಷಂಗಳೆಂಬ ಮೂರಂಗುಲವನರಿವುದು. ಸದೃಷ್ಟ ತನ್ನಷ್ಟವೆಂಬ ಉಭಯದ ಅಂಗುಲವ ಕಂಡು ಚತುರ್ವಿಧಫಲಪದಂಗಳಲ್ಲಿ ಭಾವಿಸಿ ಕಲ್ಪಿಸದಿಪ್ಪುದು ಜಪಧ್ಯಾನ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದಲ್ಲಿ.