Index   ವಚನ - 51    Search  
 
ನಾನಾ ವೇದ ಶಾಸ್ತ್ರ ಪುರಾಣ ಆಗಮ ಪಾಠಕನಾದಲ್ಲಿ ಪರಿಭಾಷೆ ಪರತತ್ವದ ಮಾತನಾಡಿದಡೇನು? ಜಿಹ್ವೇಂದ್ರಿಯಕ್ಕೆ ಹರಿಯದೆ, ಗುಹ್ಯೇಂದ್ರಿಯಕ್ಕೆ ಸಿಕ್ಕದೆ ಬಂದ ತೆರನನರಿದು ವಿಚಾರಿಸಿ ಮುಟ್ಟುವ ಕಟ್ಟನರಿತು ಅರ್ಪಿತದ ಭೇದವನರಿದು ವಸ್ತುವಿಪ್ಪೆಡೆಯಲ್ಲಿ ಅರ್ಪಿಸಬಲ್ಲಡೆ ವಿರಕ್ತನು, ಅಲ್ಲದಿರ್ದಡೆ ಪಂಡಿತನಪ್ಪನು. ಇಂತೀ ಉಭಯದ ಸೊಲ್ಲನರಿಯಬೇಕು ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದಲ್ಲಿ.