ನಾನಾ ಶಬ್ದ ಸಂಸ್ಕೃತ ದೇಶೀಯ ವ್ಯಾಕರಣಸೂತ್ರ
ಮುಂತಾದ ಬಿಂದು ಮಾತೃಕ ತ್ರಿಲಿಂಗಭೇದ
ಉಪನಿಷತ್ತು ಸಂಹಿತೆ ಜಯಂತಿ ಚತು[ರ್ಥಿ]ಕನಿಮಿಷಕ
ಈ ಉಭಯ ಪ್ರತಿಷ್ಠೆ ವಾಚಕ ಮತಿ ವಾಯುಬಿಂದು ಕೂಡಿದ ಆಮ್ನೆ
ಇಂತಿವ ಲಕ್ಷಿಸಿ ನಿಂದಡೂ ತ್ರಿಗುಣಮಲತ್ರಯಕ್ಕೆ ಹೊರಗಾಗಬೇಕು.
ಹೊರಗಾದಡೂ ದುರ್ವಾಸನೆ ಆತ್ಮಭೇದಂಗಳಲ್ಲಿ
ನಿಜವಸ್ತುವ ಕುರಿತು ಸ್ವಸ್ಥನಾಗಿರಬೇಕು.
ಇಂತೀ ಗುಣಸ್ವಸ್ಥನಾಗಿ ನಿಂದಲ್ಲಿ ಅಂಗಕ್ಕೆ ಆಚಾರ, ಮನಕ್ಕೆ ಅರಿವು.
ಅರಿವೆಂಬುದೊಂದು ಕುರುಹು ನಿಷ್ಪತ್ತಿಯಹನ್ನಕ್ಕ
ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗಾ ಎನುತ್ತಿರಬೇಕು.