ನಾನಾ ಶಬ್ದಸೂತ್ರ ಲಕ್ಷಣಂಗಳಲ್ಲಿ ನ್ಯೂನಾಧಿಕವಿಲ್ಲದಂತೆ
ವಚನಂಗಳ ರಚನೆಗಳಲ್ಲಿ ನಿರ್ವಚನ ಕಾರಣನಾಗಿ
ಸರ್ವಗುಣಸಂಪನ್ನನಾಗಿರ್ದದಲ್ಲಿ
ಭೂತಹಿತವನರಿತು ಆತ್ಮಚಿತ್ತವ ಮರೆದು
ಶರಣ ಸಂಭಾಷಣೆಯಲ್ಲಿ ಶಿವಮೂರ್ತಿಧ್ಯಾನಂಗಳಲ್ಲಿ
ಶಿವಕಥನ [ಯಥಾ ಕಥನ] ಪ್ರಸಂಗಳಲ್ಲಿ
ಶಿವಪೂಜಾ ಮೂರ್ತಿಧ್ಯಾನಂಗಳಲ್ಲಿ
ಉಭಯವಳಿದು ಏಕವಾಗಿ ಸ್ವೀಕರಿಸಿದಲ್ಲಿ
ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವ
ಅವಧರಿಸಿದ ಅಂಗ.
Art
Manuscript
Music
Courtesy:
Transliteration
Nānā śabdasūtra lakṣaṇaṅgaḷalli n'yūnādhikavilladante
vacanaṅgaḷa racanegaḷalli nirvacana kāraṇanāgi
sarvaguṇasampannanāgirdadalli
bhūtahitavanaritu ātmacittava maredu
śaraṇa sambhāṣaṇeyalli śivamūrtidhyānaṅgaḷalli
śivakathana [yathā kathana] prasaṅgaḷalli
śivapūjā mūrtidhyānaṅgaḷalli
ubhayavaḷidu ēkavāgi svīkarisidalli
cannabasavaṇṇapriya bhōgamallikārjunaliṅgava
avadharisida aṅga.