Index   ವಚನ - 58    Search  
 
ಪೂರ್ವಾಂಗ ಪಕ್ಷ ದಹನ ಸಮಾಧಿಗಳೆಂಬಲ್ಲಿ ಭಸ್ಮ ಮೃತ್ತಿಕೆಗಳಿಂದ ಉಭಯನಾಮಭೇದವಾದ ತೆರನ ತಿಳಿಯಬೇಕು. ಶೈವ ವೈಷ್ಣವವೆಂಬಲ್ಲಿ ಪಂಚಭೂತಿಕಾತ್ಮಕ್ಕೆ ಪೃಥ್ವಿ ಅಪ್ಪು ತೇಜ ವಾಯು ಆಕಾಶಂಗಳೆಂಬಲ್ಲಿ ಶೈವ ಸಾಂಖ್ಯಮತಕ್ಕೆ ಬೇರೆ ಧರೆ ಜಲ ಅನಲ ಅನಿಲ ಈ ಚತುರ್ಗುಣ ಮುಂತಾದವಕ್ಕೆ ಭೇದನಾಮವ ಕಂಡಲ್ಲಿ ವಿಭೇದವುಂಟು ಉಂಟೆಂದಡೆ ತರ್ಕ. ಈ ಕುತರ್ಕಂಗಳಲ್ಲಿ ಲಕ್ಷಿತವಲ್ಲದೆ ಲೋಹವ ಲೋಹದ ಬಲಿಕೆಯಿಂದ ಖಂಡಿಸುವಂತೆ ನಿಃಸತ್ವವ ಸತ್ವದಿಂದ ಪರಿಹರಿಸುವಂತೆ ತೆಪ್ಪವ ನೀರದಪ್ಪದಿಂದ ಒತ್ತುವಂತೆ ಶಕ್ತಿಯ ಸಂಭವ ವಿರಕ್ತಿಯ ನಿಶ್ಚಯ ಉಭಯಚಕ್ಷುಗೂಡಿ ಇಷ್ಟವ ಏಕದೃಷ್ಟಿಯಿಂದ ಕಾಂಬಂತೆ ಇಲ್ಲ ಉಂಟೆಂಬುದು ನಿಜದಲ್ಲಿಯೆ ಅದೆ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದಲ್ಲಿಯೆ.