Index   ವಚನ - 57    Search  
 
ಪಶು ಪಾಷಂಡಿ ಚಾರ್ವಾಕ ಮಾತುಗಂಟಿ ಎಷ್ಟನಾಡಿದಡೂ ಶಿವಯೋಗಸಂಬಂಧ ಸಂಪನ್ನನೊಪ್ಪುವನೆ? ರಾಜ್ಯಭ್ರಷ್ಟಂಗೆ ತ್ಯಾಗಭೋಗವುಂಟೆ? ನಪುಂಸಕಂಗೆ ಜಿತೇಂದ್ರಿಯತ್ವವುಂಟೆ? ದರಿದ್ರಂಗೆ ನಿಸ್ಪೃಹತ್ವವುಂಟೆ? ನಿಶ್ಚೈಸಿ ನಿಜವಸ್ತುವನರಿಯದವನು ಕರ್ತೃಭೃತ್ಯಸಂಬಂಧವನೆತ್ತ ಬಲ್ಲನೊ? ಮೃತಘಟದ ವೈಭವದಂತೆ, ವಿಧವೆಯ ಗರ್ಭದಂತೆ ನಿನ್ನಲ್ಲಿಯೆ ನೀನರಿ ದ್ವೈತಾದ್ವೈತಂಗಳೆಂಬವ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದಲ್ಲಿ.