Index   ವಚನ - 100    Search  
 
ಸೂತ್ರ ಪ್ರಕರಣಗಳಿಂದ ಏಕಸಂಜ್ಞೆ ದ್ವಯಸಂಪರ್ಕ, ತ್ರಿವಿಧಭೇದ ಚತುರ್ಭಾಗ ಪಂಚವಿಂಶತಿ ಶಾಂಕರೀಯ ರಘುಪ್ರಕಾರ, ಮೀಮಾಂಸಕಾ ಸೂತ್ರ ವಿಷಮಸಂಧಿಭೇದಕಾ ಪ್ರಯೋಗ ಪ್ರಾತಃಕಾಲ ರಿತು ಉಚಿತತಮ ತತ್ಕಾಲ ನಾರಣೀಯ ಜೈಮಿನಿ ಭೇದ, ಪಾರಸೀಯ ಸಾಂಖ್ಯ ಕಾಪಾಲಿಕ ಬೌದ್ಧ ಶೈವ. ಇಂತೀ ಆಗಮ ಸೂತ್ರ ನಾನಾವಿಲಕ್ಷಣ ಲಕ್ಷಣಂಗಳಲ್ಲಿ ತಿಳಿದಡೂ ಕರ್ಮವಾರು ವರ್ಮ ಮೂರು ಸದ್ಧರ್ಮವೊಂದರಲ್ಲಿ ನಿರತನಾಗಿ ಸರ್ವಗುಣಸಂಪನ್ನನಾಗಿ ಲಿಂಗಪ್ರಾಣಿಯಾಗಿ ಪ್ರಾಣಲಿಂಗಿಯಾಗಿ ನಿಂದಾತಂಗೆ ಅಂಗ ಆತ್ಮನೆಂಬ ಉಭಯದ ಸಂದಿಲ್ಲ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವು ತಾನಾಗಿ.