Index   ವಚನ - 101    Search  
 
ಸೃಷ್ಟಿಯೊಳಗಾದ ತೀರ್ಥಂಗಳ ಮೆಟ್ಟಿ ಬಂದಡೂ ದೃಷ್ಟಿಮತಿ, ನಿಮುಷಮತಿ, ಭೇದಮತಿ [ವೇ]ದ್ಯಮತಿ ಅಭೇದ್ಯಭೇದಕಮತಿ ಉಚಿತಮತಿ ಸಾಮಮತಿ ದಾನಮತಿ ದಂಡಮತಿ ಆತ್ಮಚಿಂತನಮತಿಗಳಲ್ಲಿ ನುಡಿದಡೂ ಪಂಡಿತನಪ್ಪನಲ್ಲದೆ ವಸ್ತುವ ಮುಟ್ಟ. ಇದಕ್ಕೆ ದೃಷ್ಟ ಮತ್ತರಿಗೆ ಹಾಕಿದ ಮುಂಡಿಗೆ. ವಸ್ತುವನರಿದುದಕ್ಕೆ ಲಕ್ಷಣವೇನೆಂದಡೆ: ತಥ್ಯಮಿಥ್ಯವಳಿದು ರಾಗದ್ವೇಷ ನಿಂದು ಆವಾವ ಗುಣದಲ್ಲಿಯೂ ನಿರ್ಭಾವಿತನಾಗಿ ಸರ್ವಗುಣಸಂಪನ್ನನಾಗಿ ತತ್ಪ್ರಾಣ ಸಾವಧಾನವನರಿತು ಬಂದ ಬಂದ ಮುಖದಲ್ಲಿ ಲಿಂಗಾರ್ಪಿತವ ಮಾಡಿ ನಿಂದುದೆ ನಿಜಲಿಂಗಾಂಗ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವು ತಾನೆ.