Hindi Translationचंद्रोदय से अंबुधि में ज्वार आता है;
चंद्र के क्षीण होने से घाटा,
चंद्र पथ में राहु के आडे आने पर
अंबुधि ने कोलाहल मचाया?
अंबुधि को मुनि के स्वाह करने पर
चंद्र ने विरोध किया, स्वामी?
कोई किसी का नहीं, पतितों का साथी नहीं
जगद्बंधु तुम ही हो, कूडलसंगमदेव ॥
Translated by: Banakara K Gowdappa
English Translation At the rise of moon the ocean swells;
It ebbs at waning of the moon....
When Rāhu puts a screen
Before the moon, pray, does
The sea set up a cry ?
And when the Sage drained up the sea,
Pray, did the moon come in between ?
Nobody is for anybody, so !
The fallen have no friend !
Thou only, Lord
Kūḍala Saṅgama,
Art the world's kin !
Translated by: L M A Menezes, S M Angadi
Tamil Translationநிறை நிலவிற்குக் கடல் பொங்குமையனே
நிலவுகுன்றின் குன்றுமையனே
நிலவினை இராகு கிரகணம் பிடித்துழி
கடல் ஆர்ப்பரித்ததோ ஐயனே?
கடல்நீரினை அகத்தியமுனி அருந்துழி
நிலவு குறுக்கே வந்தானோ வையனே?
யாருக்குயாருமில்லை, தீயோனுக்கு நட்பிலை
உலகிற்கு உறவு நீயே ஐயனே
கூடலசங்கம தேவனே.
Translated by: Smt. Kalyani Venkataraman, Chennai
Urdu Translationچاند جب بارہویں منزل میں قدم رکھتا ہے
سینۂ بحرمیں ہوتا ہے تموّج پیدا
اورگھٹتا ہے توموجوں کی جنوں خیزلگن
پھرسےچپ چاپ سمندرمیں اترجاتی ہے
اورجب راہونکلتا ہےقمرکوتب بھی
چیختا ہے، نہ سمندرکبھی چلّاتا ہے
جب مُنی پی گیا چلّومیں سمندر بھر کر
چاند بھی راہ میں آیا نہ بچانےاس کو
صرف اظہارِمحبت سےبھلا کیا ہوگا
اہل ِغم کا نہیں دنیا میں کوئی بھی ہمدم
سب پہ جاری ہےمگرکوڈلا سنگا کا کرم
Translated by: Hameed Almas
ಕನ್ನಡ ವ್ಯಾಖ್ಯಾನನಿಜವಾದ ಹಿತೈಷಿ
ಸಮುದ್ರದಲ್ಲಿ ಉಬ್ಬರ ಇಳಿತಗಳಾಗುವುದಕ್ಕೆ ಚಂದ್ರನೇ ಕಾರಣ ಎನ್ನುವುದು ವೈಜ್ಞಾನಿಕ ಸತ್ಯ. ಪೌರ್ಣಿಮೆಯಂದು ಸಮುದ್ರದ ಆರ್ಭಟವೇ ಆರ್ಭಟ. ಗಗನದೆತ್ತರಕ್ಕೆ ಏರುವುವು ಬೃಹದಾಕಾರದ ತರಂಗಗಳು. ಕ್ಷಣ ಕ್ಷಣಕ್ಕೂ ಪುಟಿದು ಆಕಾಶದತ್ತ ಸಿಡಿದೇಳುವುವು ಆ ಬೃಹತ್ತರಂಗಗಳು. ಮರುಕ್ಷಣವೇ ತೀರವನ್ನವು ಒಮ್ಮೆಲೇ ರ್ರಪ್ಪೆಂದು ಅಪ್ಪಳಿಸುವುವು. ಚಂದ್ರನುದಯಿಸುವುದೇ ತಡ ಸಮುದ್ರದಲ್ಲಿ ಈ ರೀತಿ ಅಲ್ಲೋಲ ಕಲ್ಲೋಲವಾಗುತ್ತದೆ. ಸಮುದ್ರ ಒಂದು ಕಡೆ ಉಬ್ಬಿಕೊಂಡಿರುವುದನ್ನು ನೋಡಿದರೆ ಅದು ಮೈಯುಬ್ಬಿ ಚಂದ್ರನನ್ನು ಮುದ್ದಿಸಹೊರಟಿರುವುದೋ ಎಂದೆನಿಸುವುದು. ಹೀಗಿರುವಾಗ ಅಮಾವಾಸ್ಯೆ ಸಮೀಪಿಸಿತೆಂದರೆ ಎಲ್ಲೆಲ್ಲೂ ನೀರವತೆ, ನಿಶ್ಚಲತೆ, ಪ್ರಶಾಂತ ವಾತಾವರಣ. ಏನೋ ಕಳೆದುಕೊಂಡಂತೆ ತೋರುವ ಭಾವ. ಅಲೆಗಳ ಸುದ್ದಿಯೇ ಇಲ್ಲ. ನಮ್ಮ ಕಣ್ಮುಂದಿರುವ ಈ ದೃಶ್ಯ ಚಂದ್ರ ಮತ್ತು ಸಮುದ್ರ ಇವೆರಡರಲ್ಲಿ ಎಷ್ಟೊಂದು ಗಾಢವಾದ ಸ್ನೇಹವಿದೆಯೆಂಬುದನ್ನು ತೋರಿಸುತ್ತದೆ.
ಸೂರ್ಯ ಮತ್ತು ಚಂದ್ರನ ನಡುವೆ ಭೂಮಿಯು ಬಂದು ಚಂದ್ರ ಭೂಮಿಯ ನೆರಳಿನೊಳಗಾದಾಗ ಚಂದ್ರ ಗ್ರಹಣವಾಗುತ್ತದೆಯೆಂದು ಇಂದಿನ ಖಗೋಳ ಶಾಸ್ತ್ರಜ್ಞರು ಸಾಧಸಿ ತೋರಿಸಿದ್ದಾರೆ. ಇದನ್ನೆ ನಮ್ಮ ಹಿಂದಿನ ಪುರಾಣ ಶಾಸ್ತ್ರಜ್ಞರು ರಾಹು ಎಂಬ ಗ್ರಹವಿದೆ. ಅದು ಚಂದ್ರನನ್ನು ಹಿಡಿದುಕೊಳ್ಳುತ್ತದೆ, ಆಗ ಚಂದ್ರಗ್ರಹಣವಾಗುತ್ತದೆಯೆಂದು ನಂಬಿದ್ದರು. ಈ ಪೌರಾಣಿಕ ಕಥೆಯನ್ನು ದೃಷ್ಟಿಯಲ್ಲಿಟ್ಟುಕೊಂಡೇ ಬಸವಣ್ಣನವರು ಚಂದ್ರಮಂಗೆ ರಾಹು ಅಡ್ಡಬಂದಲ್ಲಿ ಅಂಬುಧಿ ಬೊಬ್ಬಿಟ್ಟಿತ್ತೇ? ಎಂದು ಕೇಳುತ್ತಾರೆ. ಚಂದ್ರನ ಕಳೆ ಹೆಚ್ಚಿದಾಗ ಹೆಚ್ಚುತ್ತಾ, ಚಂದ್ರನ ಕಳೆ ಕುಂದಿದಾಗ ಕುಂದುತ್ತಾ ಚಂದ್ರನ ವೃದ್ಧಿಯೇ ತನ್ನ ವೃದ್ಧಿಯೆಂದೂ ಚಂದ್ರನ ಹಾನಿಯೇ ತನ್ನ ಹಾನಿಯೆಂದೂ ಭಾವಿಸಿದ್ದ ಸಮುದ್ರವು ಅದೇ ಚಂದ್ರನನ್ನು ರಾಹು ಹಿಡಿದು ಹಿಂಸಿಸುತ್ತಿರುವಾಗ ರಾಹುವನ್ನು ಪ್ರತಿಭಟಿಸಲಿಲ್ಲವೇಕೆ? ಅವನ ವಿರುದ್ಧ ಬೊಬ್ಬಿಡಲಿಲ್ಲವೇಕೆ? ಸಮುದ್ರ, ಚಂದ್ರನಲ್ಲಿ ಆತ್ಮೀಯತೆಯನ್ನು ಹೊಂದಿದ್ದೇ ನಿಜವಾಗಿದ್ದರೆ ಚಂದ್ರನು ತೊಂದರೆಗೊಳಗಾದಾಗ ಅವನ ಬಗ್ಗೆ ಅನುಕಂಪೆ ತೋರಬೇಕಾಗಿತ್ತು. ಆದರೆ ಸಮುದ್ರ ಚಂದ್ರನಿಗೆ ಕಷ್ಟದಲ್ಲಿ ಆಗಲಿಲ್ಲ. ಇದೂ ಹೋಗಲಿ, ಚಂದ್ರನಾದರೂ ಸಮುದ್ರದ ಬಗ್ಗೆ ಅನುಕಂಪೆ ತೋರಿದನೇ? ಅದೂ ಇಲ್ಲ. ಏಕೆಂದರೆ ಅಗಸ್ತ್ಯ ಮಹರ್ಷಿಯು ಇಡೀ ಸಮುದ್ರವನ್ನೇ ಒಂದೇ ಗುಟುಕಿಗೆ ಪಾನಮಾಡಿದಾಗ (ಪೌರಾಣಿಕ ಕಥೆ) ಸಮುದ್ರದ ಮೇಲಿರುವ ಸ್ನೇಹದ ಕಾರಣದಿಂದಾಗಿ ಚಂದ್ರ ಆ ಅಗಸ್ತ್ಯ ಮುನಿಯನ್ನು ತಡೆ ಹಿಡಿಯಲಿಲ್ಲವೇಕೆ? ಹೀಗೆ ಚಂದ್ರ ಕಷ್ಟದಲ್ಲಿರುವಾಗ ಸಮುದ್ರವಾಗಲೀ, ಸಮುದ್ರ ಕಷ್ಟದಲ್ಲಿರುವಾಗ ಚಂದ್ರನಾಗಲೀ ಸಹಾಯಕ್ಕೆ ಬರಲಿಲ್ಲ. ಇದೊಂದು ನಿರ್ಜೀವ ವಸ್ತುಗಳ ಉದಾಹರಣೆ. ಈ ಚಂದ್ರ ಸಮುದ್ರಗಳ ಮೂಲಕ ಮಾನವರಲ್ಲಿ ಕಾಣಬರುವ ಮಾನವ ಸಹಜ ದೌರ್ಬಲ್ಯವನ್ನು ಎತ್ತಿ ತೋರಿಸಿದ್ದಾರೆ ಬಸವಣ್ಣನವರು. ಒಬ್ಬ ವ್ಯಕ್ತಿ ಸಂಪದ್ಭರಿತನಾಗಿ ಚೆನ್ನಾಗಿದ್ದಾಗಲೇ ಅವನ ಸುತ್ತ ಜನ ಘೇರೈಸಿ ಇಂದ್ರ ಚಂದ್ರ ದೇವೇಂದ್ರನೆಂದು ಹೊಗಳುವುದು. ನಂಟರಾದವರೋ ಹೇಳತೀರದು; ಇಲ್ಲದ ಸಂಬಂಧವನ್ನು ಕಲ್ಪಿಸಿಕೊಂಡು ಮುನ್ನುಗ್ಗಿ ಬರುತ್ತಾರೆ. ಆದರೆ ವಿಧಿವಶಾತ್ ಅವನ ಸಂಪತ್ತೆಲ್ಲವೂ ವಿನಾಶಗೊಂಡು ಭಿಕ್ಷಾಪಾತ್ರೆಯು ಕೈಗೆ ಬಂದಾಗ ಯಾರೂ ಹತ್ತಿರ ಸುಳಿಯುವುದಿಲ್ಲ. ನಂಟರಂತೂ ಮೊದಲೇ ಇಲ್ಲ. ಏನೋ ಪಾಪ ಹೀಗಾಗಬಾರದಾಗಿತ್ತು ಎಂಬ ಅನುಕಂಪೆಯ ಮಾತಿರಲಿ, ಇದ್ದಾಗ ಎಷ್ಟೊಂದು ಮೆರೆದ, ಈಗ ಆಗಿದ್ದೇ ಸರಿ, ತಕ್ಕ ಶಾಸ್ತಿಯಾಯಿತು ಎಂಬ ಕಟಿಕಿಯ ಮಾತುಗಳು ಬೇರೆ! ಆದ್ದರಿಂದ ‘ಆರಿಗೆ ಆರೂ ಇಲ್ಲ, ಕೆಟ್ಟವಂಗೆ ಕೆಳೆಯಿಲ್ಲ....’ ಯಾರಿಗೆ ಯಾರೂ ಹಿತ ಬಯಸುವುದಿಲ್ಲ. ಅಧಿಕಾರ, ಐಶ್ವರ್ಯಗಳಿದ್ದಾಗಲೇ ಯಾರು ಯಾರನ್ನಾದರೂ ಪ್ರೀತಿಸುವುದು. ಅವು ಇಲ್ಲದಂತಾದ ಮರುಘಳಿಗೆಯಲ್ಲಿಯೇ ಆ ವ್ಯಕ್ತಿಯನ್ನು ಕಡೆಗಣಿಸಿ ಅವು ಇರುವ ವ್ಯಕ್ತಿಯನ್ನು ಅರಸಿಕೊಂಡೇ ಹೋಗುತ್ತಾರೆ. ಹೀಗೆ ನಿರ್ಗತಿಕನಾದ ವ್ಯಕ್ತಿಗೆ ಗೆಳೆಯರೆಂಬುವರೇ ಇಲ್ಲ. ಅಂಥವನಿಗೆ ದೇವರೇ ಗತಿ, ಅವನೇ ಎಲ್ಲರ ಹಿತೈಷಿ. ‘ಜಗದ ನಂಟ ನೀನೇ ಅಯ್ಯಾ ಕೂಡಲ ಸಂಗಮದೇವಾ’.
- ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು.
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.