Hindi Translationपूर्व कृत पाप न छूटने तक
अब आशा करने से क्या होगा?
भक्तों को देख देख कर
आशा करने से क्या होगा ?
कूडलसंगमदेव से पहले ही
वर प्राप्त न करने तक?
Translated by: Banakara K Gowdappa
English Translation What does it help to yearn
And yearn again,
Unless your fore-committed sin
Has ceased to chase you ?
What helps to gaze and gaze
Upon the men of God,
Unless you have obtained
The gift, already, from the Lord
Kūḍala Saṅgama ?
Translated by: L M A Menezes, S M Angadi
Tamil Translationமுதலிலே செய்த தீவினை தொடரும் போழ்து
இன்னும் விரும்பி னுண்டோ?
பக்தியுள்ளோரைக் கண்டுகண்டு நயந்தாலுமுண்டோ
கூடலசங்கம தேவனிடத்திலே முன்னே பேறெய்தும் வரை.
Translated by: Smt. Kalyani Venkataraman, Chennai
Telugu Translationమునుచేసిన పాపము విడనంతదాక వెన్ను;
ఆశపడ వచ్చునే మతి?
భక్తి గలవారల చూచి చూచి ఆశింప ఫలించునే?
కూడల సంగమ దేవుని ముందు;
ముందె వరమందకున్న.
Translated by: Dr. Badala Ramaiah
Urdu TranslationTranslated by: Hameed Almas
ಸ್ಥಲ -
ಸಂಸಾರಹೇಯಸ್ಥಲವಿಷಯ -
ಪಾಪ
ಶಬ್ದಾರ್ಥಗಳುಮುನ್ನ = ಮೊದಲು; ಹಡೆಯ = ಗಳಿಸಿದ;
ಕನ್ನಡ ವ್ಯಾಖ್ಯಾನಭಕ್ತಿಯಲ್ಲಿ ನಡೆಯುವ ಸಾಧಕನಿಗೆ-ತನ್ನ ಮಾರ್ಗ ಸುಗಮವಲ್ಲವೆನಿಸಿದರೆ-ಅದಕ್ಕೆ ಕಾರಣವನ್ನು ಅವನು ತನ್ನಲ್ಲಿಯೇ ಹುಡುಕಿಕೊಳ್ಳಬೇಕು. ತನ್ನ ಹಿಂದಿನ ಜನ್ಮಗಳಲ್ಲಾಗಲಿ, ಅಥವಾ ದೀಕ್ಷಾಬದ್ದನಾಗುವುದಕ್ಕೆ ಮೊದಲ ಪೂರ್ವಾಶ್ರಮದಲ್ಲಾಗಲಿ-ತಾನು ತಳೆದ ತಾಮಸ, ಮಾಡಿದ ಆಕೃತ್ಯಗಳೇ ತನ್ನ ಪ್ರಸ್ತುತ ಹಿಂಜರಿತಕ್ಕೆ ಕಾರಣವೆಂಬುದು ಬಸವಣ್ಣನವರ ನಂಬಿಕೆ.
ಒಬ್ಬನು ಆಧ್ಯಾತ್ಮಿಕತೆಯನ್ನು ಸುಲಭವಾಗಿ ಪಡೆಯುವನು-ಇನ್ನೊಬ್ಬನು ಎಷ್ಟೇ ಪ್ರಯತ್ನದಿಂದಲಾದರೂ-ಅದನ್ನು ರೂಢಿಸಿಕೊಳ್ಳಲಾಗದೆ ಮರಳಿ ಮರಳಿ ಹತಾಶನಾಗುತ್ತಿರುವನು.
ವ್ಯಕ್ತಿಯಿಂದ ವ್ಯಕ್ತಿಗಿರುವ ಈ ತಾರತಮ್ಯಕ್ಕೆ ಕಾರಣ ಅವನ ಪೂರ್ವಜನ್ಮದ ಅಥವಾ ಪೂರ್ವ ಜೀವನದ ಕರ್ಮಫಲವೇ ಆಗಿದೆ. ಆದುದರಿಂದಲೇ ದಿವ್ಯಜೀವನದಲ್ಲಿ ನಿರಾತಂಕವಾಗಿ ಪ್ರಗತಿ ಸಾಧಿಸುವ ಸಂತರನ್ನು ಕಂಡು ನಾವು ಕರುಬಿದರಾಗದು-ಅವರಂತೆ ನಾವೂ ಪಡೆದುಬಂದವರಾಗಿರಬೇಕೆಂದು-ಆತ್ಮಕ್ಕೆ ಪ್ರತಿಕೂಲವಾದ ತಮ್ಮ ದೇಹಮನಗಳ ಅಂಕುಡೊಂಕುಗಳನ್ನು ಕುರಿತು ಬಸವಣ್ಣನವರು ವಿಷಾದಿಸುತ್ತಿರುವರು.
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.