Hindi Translationमटका बनाने में मिट्टी ही मूल है;
गहना बनाने में स्वर्ण ही मूल है;
शिवपथ जानने में गुरुपथ ही मूल है;
कूडलसंगम को जानने में
शरण संग ही मूल है ॥
Translated by: Banakara K Gowdappa
English Translation In making a pot
The clay comes first ;
In making an ornament,
The gold comes first;
In knowing Śiva's path,
The Guru's path comes first ;
In knowing Kūḍala Saṅgama,
The fellowship of Śaraṇās
Comes first.
Translated by: L M A Menezes, S M Angadi
Tamil Translationமட்கலம் வடித்தற்கு மண்ணே முதல்
அணிகலன் செய்தற்கு பொன்னே முதல்
சிவநெறியையறிதற்கு குரு தீட்சையே முதல்
கூடல சங்கம தேவனை யறிதற்கு
மெய்யன்பர் தொடர்பே முதல்.
Translated by: Smt. Kalyani Venkataraman, Chennai
ಕನ್ನಡ ವ್ಯಾಖ್ಯಾನದೇವರನರಿವುದಕ್ಕೆ ಸಜ್ಜನರ ಸಂಗಬೇಕು
ಒಂದು ಮಡಕೆಯನ್ನು ಮಾಡಲು ಕುಂಬಾರನಿಗೆ ಮಣ್ಣು ಅತ್ಯಾವಶ್ಯಕ. ಮಣ್ಣಿಲ್ಲದೆ ಮಡಕೆಯನ್ನು ಮಾಡಲು ಸಾಧ್ಯವಿಲ್ಲ. ಇದರಂತೆಯೇ ಆಭರಣವನ್ನು ಮಾಡಲು ಅಕ್ಕಸಾಲಿಗನಿಗೆ ಬಂಗಾರ ಅನಿವಾರ್ಯ. ಬಂಗಾರವಿಲ್ಲದೆ ಅವನು ಒಡವೆಯನ್ನು ಮಾಡಲಾರ. ಅಂತೆಯೇ ಶಿವಪಥವನ್ನು ತಿಳಿಯಬೇಕಾದರೆ ಗುರುಪಥ ಬೇಕೇ ಬೇಕು. ಗುರು ತೋರಿದ ಮಾರ್ಗದಲ್ಲಿ ಹೋದರೆ ಶಿವಪಥದತ್ತ ಸಾಗಲು ಸಾಧ್ಯ. ಸಂಸ್ಕೃತದಲ್ಲಿ 'ಶಿವ' ಎಂದರೆ 'ಮಂಗಲ', 'ಶುಭ', 'ಕಲ್ಯಾಣ' ಎಂದರ್ಥ. ‘ಪಥ’ ಎಂದರೆ ಮಾರ್ಗ. ಆದ್ದರಿಂದ 'ಶಿವಪಥ'ವೆಂದರೆ ನಮಗೆ ಮಂಗಲವನ್ನು ತರುವ, ಶುಭವನ್ನು ದೊರಕಿಸಿ ಕೊಡುವ, ಕಲ್ಯಾಣವನ್ನುಂಟುಮಾಡುವ ಮಾರ್ಗವೆಂದರ್ಥ. ಅಂತಹ ಮಾರ್ಗವನ್ನು ತೋರಿಸುವ ಅರ್ಹತೆ ಜ್ಞಾನಿಯಾದ ವ್ಯಕ್ತಿಗೇ ಇರುವುದು, ಅವನೇ ಗುರು ಎನಿಸಿಕೊಳ್ಳುವನು. “ಅಂಧೇನ ನಿಯಮಾನೋಯಥಾಂಧಃ” ಎಂದು ಸಂಸ್ಕೃತದಲ್ಲಿ ಒಂದು ಉಕ್ತಿ ಇದೆ. 'ಕುರುಡನಿಂದ ಕರೆದುಕೊಂಡು ಹೋಗಲ್ಪಡುವ ಕುರುಡನಂತೆ' ಎಂದು ಇದರ ಅರ್ಥ. ನಡೆಯುವವನೂ ಕುರುಡ, ನಡೆಸಿಕೊಂಡು ಹೋಗುವವನೂ ಕುರುಡ, ಹಾಗಾದರೆ ಗುರಿಮುಟ್ಟುವುದೆಂತು? ಅದನ್ನೇ ಸರ್ವಜ್ಞ ಕವಿ “ಬಳ್ಳಿ ಗುರುಡರು ಸೇರಿ ಹಳ್ಳವನು ಬಿದ್ದಂತೆ! ಒಳ್ಳೆಯಾ ಗುರುವಿನುಪದೇಶವಿಲ್ಲದಿರೆ ಎಲ್ಲಿಹುದು ಮುಕ್ತಿ ಸರ್ವಜ್ಞ” ಎಂದಿರುವುದು.
ಯಾವನಾದರೂ ಒಬ್ಬ ಕೆಟ್ಟ ಕೃತ್ಯಗಳಲ್ಲಿ ತೊಡಗಿದ್ದರೆ ‘ಏನು ಮಾಡುವುದು, ಸಹವಾಸ ದೋಷ’ ಎನ್ನುತ್ತೇವೆ. ಕಟುಕನ ಮನೆ ಗಿಳಿ, ಹಿಡಿಯಿರಿ, ಬಡಿಯಿರಿ, ಎಂದರೆ, ಸಭ್ಯ ಗೃಹಸ್ಥನ ಮನೆಯ ಗಿಳಿ ‘ಶಿವ ಶಿವಾ, ಬನ್ನಿ, ಕುಳಿತುಕೊಳ್ಳಿ’ ಎನ್ನುತ್ತದೆ. ಆದ್ದರಿಂದ ಜೀವನವನ್ನು ರೂಪಿಸಿಕೊಳ್ಳುವುದರಲ್ಲಿ ಉತ್ತಮ ಸಹವಾಸ ಸಹಾಯಕಾರಿ ಹಾಗೂ ಪರಿಣಾಮಕಾರಿ. ಅಂತೆಯೇ ದೇವರನ್ನು ಅರಿಯಲು, ಸಾಕ್ಷಾತ್ಕಾರ ಮಾಡಿಕೊಳ್ಳಲು ಶರಣರ ಅಂದರೆ ಶಿವನಲ್ಲಿ ಶರಣಾಗತಿಯನ್ನು ಪಡೆದ ಶಿವಭಕ್ತರ ಸಹವಾಸ ಅವಶ್ಯಕ.
- ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು.
ಪೂಜ್ಯರಿಗೆ ಶರಣು ಶರಣಾರ್ಥಿ. ವಾಸ್ತವ : ಕುಡಿದವರ ಜೊತೆ ಇರಿ ಕುಡಿದಂತೆ ಇರಿ ಆದರೆ ಕುಡಿ ಬೇಡಿ.
  ಡಾ. ಹಿತೇಶ್ವರ ಜಿ.ಹೆಚ್
???????. ???????? ??, ???? ??, ???????????
ವಚನಕಾರ ಮಾಹಿತಿ
ಬಸವಣ್ಣ
ಅಂಕಿತನಾಮ:
ಕೂಡಲಸಂಗಮದೇವ
ವಚನಗಳು:
1409
ಕಾಲ:
12ನೆಯ ಶತಮಾನ
ಕಾಯಕ:
ಪ್ರಧಾನಮಂತ್ರಿ-ಶಿವಯೋಗ ಜೀವನ ಬೋಧನೆ
ಜನ್ಮಸ್ಥಳ:
ಇಂಗಳೇಶ್ವರ-ಬಾಗೇವಾಡಿ, ವಿಜಯಪುರ ಜಿಲ್ಲೆ.
ಕಾರ್ಯಕ್ಷೇತ್ರ:
ಕೂಡಲಸಂಗಮ-ಮಂಗಳವೇಢೆ-ಕಲ್ಯಾಣ
ತಂದೆ:
ಮಾದರಸ
ತಾಯಿ:
ಮಾದಲಾಂಬಿಕೆ
ಸತಿ/ಪತಿ:
ಗಂಗಾಂಬಿಕೆ ಮತ್ತು ನೀಲಾಂಬಿಕೆ
ಐಕ್ಯ ಸ್ಥಳ:
ಕೂಡಲಸಂಗಮ, ಹುನಗುಂದ ತಾಲ್ಲೂಕು, ಬಾಗಲಕೋಟೆ ಜಿಲ್ಲೆ.
ಪೂರ್ವಾಶ್ರಮ:
ಆಗಮಿಕ ಶೈವಬ್ರಾಹ್ಮಣ
ಸಂಕ್ಷಿಪ್ತ ಪರಿಚಯ:
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.