ಹಾವಾಡಿಗನು ಮೂಕೊರತಿಯು; ತನ್ನ ಕೈಯಲ್ಲಿ ಹಾವು,
ಮಗನ ಮದುವೆಗೆ ಶಕುನವ ನೋಡ ಹೋಹಾಗ,
ಇದಿರಲೊಬ್ಬ ಮೂಕೊರತಿಯ ಹಾವಾಡಿಗನ ಕಂಡು,
ʼಶಕುನ ಹೊಲ್ಲೆಂಬʼ ಚದುರನ ನೋಡಾ!
ತನ್ನ ಸತಿ ಮೂಕೊರತಿ! ತನ್ನ ಕೈಯಲ್ಲಿ ಹಾವು!
ತಾನೂ ಮೂಕೊರೆಯ!
ತನ್ನ ಭಿನ್ನವನರಿಯದೆ ಅನ್ಯರನೆಂಬ
ಕುನ್ನಿಯನೇನೆಂಬೆ ಕೂಡಲಸಂಗಮದೇವಾ?
Hindi Translationसँपेरा नकटी पत्नी के साथ अपने हाथ में साँप लिए
पुत्र के विवाहार्थ शकुन देखेने चला,
सामने अन्य संपेरे को अपनी नकटी पत्नी के साथ,
आते देख शकुन नहीं हुआ,
कहनेवाले चतुर को देखो-
उसकी पत्नी नकटी है, हाथ में साँप है, स्वयं नकटा है,
निज दोष न जान परनिंद करनेवाले
कुत्ते को क्या कहूँ, कूडलसंगमदेव ॥
Translated by: Banakara K Gowdappa
English Translation A snake-charmer and his noseless wife,
snake in hand, walk carefully
trying to read omens
for a son's wedding,
but they meet head-on
a noseless woman
and her snake-charming husband,
and cry 'The omens are bad!'
His own wife has no nose;
there's a snake in his hand.
What shall I call such fools
who do not know themselves
and see only the others,
O lord
of the meeting
rivers!
Translated by: A K Ramanujan Book Name: Speaking Of Siva Publisher: Penguin Books ----------------------------------
A snake-charmer with his noseless wife
-A snake in his hand-
Going to find good omens for
The marriage of their son,
Meets another snake-charmer with his noseless wife
And cries, 'The omens are bad !'
Mark what a clever chap !
His own wife is noseless
In his own hand a snake,
Himeself with a cut nose !
O Lord Kūḍala Saṅgama,
What shall I say of the cur
Who, heedless of his own defect,
Points to another's fault ?
Translated by: L M A Menezes, S M Angadi
Tamil Translationபாம்பாட்டி மூக்கற்றவள், தன்கையிற் பாம்பு,
மகனின் திருமணத்திற்கு நாள் நோக்கப் போகுங்காலை
எதிரிலொரு மூக்கற்றவளும் பாம்பாட்டியும் வரக்கண்டு
“நற்சமயமன்று” என மொழியும் திறமையினைக் காணாய்!
தன் மனைவி மூக்கற்றவள், தன் கையிற் பாம்பு
தானும் மூக்கற்றவள்,
தன் குறையினையறியாது பிறரை எள்ளும்
புன்மையினை என்னென்பேன் கூடல சங்கம தேவனே.
Translated by: Smt. Kalyani Venkataraman, Chennai
Telugu Translationపాములవాడు; ముక్కిడితి తనచేతిలో పాము
కొడుకు పెండ్లికి శకునము చూడపోవుచు;
ఎదురైన ముక్కిడితిని; పాములవాని జూచి
శకునము కాలేదను చతురత చూడుమ!
తనకాంత ముక్కిడితి! ు తన చేతిలో పాము
తాను ముక్కిడి! అయ్యా
తన లోపము తా తెలియక, పరులదిట్టు
కుక్కల నేమందు కూడల సంగమదేవా!
Translated by: Dr. Badala Ramaiah
ಕನ್ನಡ ವ್ಯಾಖ್ಯಾನಶಕುನಾಪಶಕುನಗಳು ಇಲ್ಲ
ಇಲ್ಲಿ ಬಸವಣ್ಣನವರು ಒಂದು ಸುಂದರ ಚಿತ್ರಣವನ್ನು ನಮ್ಮ ಮುಂದಿಟ್ಟು ಶಕುನಗಳಲ್ಲಿ ವಿಶ್ವಾಸವಿಡುವುದನ್ನು ಹಾಗೂ ತನ್ನ ದೌರ್ಬಲ್ಯವನ್ನರಿಯದೆ ಮತ್ತೊಬ್ಬರ ದೌರ್ಬಲ್ಯದ ಕಡೆ ಬೆರಳು ಮಾಡಿ ತೋರಿಸುವ ಮಾನವ ಸಹಜ ದೌರ್ಬಲ್ಯವನ್ನೂ ಖಂಡಿಸಿದ್ದಾರೆ.
ಒಬ್ಬ ಹಾವಾಡಿಗ ಮತ್ತು ಅವನ ಮೂಗಿಲ್ಲದ ಹೆಂಡತಿ ಕೈಯಲ್ಲಿ ಹಾವನ್ನು ಹಿಡಿದುಕೊಂಡು ತಮ್ಮ ಮಗನ ಮದುವೆಗೆ ಶಕುನವನ್ನು ನೋಡಲು ಹೊರಟರು. ಹೊರಟ ಸ್ವಲ್ಪ ಹೊತ್ತಿನಲ್ಲೇ ಎದುರಿಗೆ ಮತ್ತೊಬ್ಬ ಹಾವಾಡಿಗ ಮತ್ತು ಅವನ ಹೆಂಡತಿ ಬಂದರು. ಅವಳಿಗೂ ಮೂಗಿರಲಿಲ್ಲ; ಅವರ ಕೈಯಲ್ಲೂ ಹಾವು ಇತ್ತು. ಇದನ್ನು ನೋಡಿದ ಮೊದಲನೆಯ ಹಾವಾಡಿಗ 'ಅಯ್ಯೋ, ಹಾವಾಡಿಗ ಹಾಗೂ ಅವನ ಮೂಗಿಲ್ಲದ ಹೆಂಡತಿ ಎದುರಿಗೆ ಬಂದರು, ಶಕುನ ಒಳ್ಳೆಯದಾಗಲಿಲ್ಲಾ' ಎಂದು ಶೋಕಿಸುತ್ತಾನೆ. ತನ್ನ ಹೆಂಡತಿಯೇ ಮೂಗಿಲ್ಲದವಳು, ತನ್ನ ಕೈಯಲ್ಲೇ ಹಾವಿದೆ, ತಾನೂ ಮೂಗಿಲ್ಲದವನು. ಹೀಗಿರುವಾಗ ತನಗೆ ತಾನೇ ಅಪಶಕುನವಲ್ಲದೇ ಬೇರೊಬ್ಬರಿಂದ ತನಗೆ ಅಪಶಕುನವಾಯಿತೆನ್ನುವ ಚತುರನಿಗೆ ಏನೆಂದು ಹೇಳಬೇಕು? ತನ್ನ ವಕ್ರತೆಯನ್ನೇ ಅರಿತುಕೊಳ್ಳದೆ ಮತ್ತೊಬ್ಬರ ವಕ್ರತೆಯ ಕಡೆ ಬೆರಳು ಮಾಡಿ ತೋರಿಸುವವನನ್ನು ಕುನ್ನಿ ಎಂದು ಕರೆಯದೆ ವಿಧಿಯಿಲ್ಲ.
ಕೆಲವು ವೇಳೆ ಈ ಶಕುನಗಳು ನಿಜವೆನಿಸಬಹುದು; ಆದರೆ ಆ ರೀತಿ ಆಗುವುದು ಅತಿ ವಿರಳ. ಒಂದು ಪಕ್ಷ ಆದರೂ ಒಂದಕ್ಕೊಂದಕ್ಕೆ ಸಂಬಂಧವೇನೂ ಇಲ್ಲ. ಏಕೆಂದರೆ, ಕಾಗೆಯೂ ಬಂದು ಕುಳಿತುಕೊಂಡಿತು. ಕೊಂಬೆಯೂ ಬಿತ್ತು. ಎಂದರೆ ಕಾಗೆಯ ಕಾರಣದಿಂದಲೇ ಕೊಂಬೆ ಮುರಿದು ಬಿತ್ತೆಂದು ತಿಳಿಯುವುದು, ಕಾಗೆ ಕೂತಲ್ಲೆಲ್ಲಾ ಕೊಂಬೆಗಳು ಮುರಿದು ಬೀಳುವುವು ಎನ್ನುವುದು ಮೂರ್ಖತನವಲ್ಲವೇ? ಕೊಂಬೆ ಮುರಿದು ಬೀಳುವ ಸಮಯಕ್ಕೆ ಸರಿಯಾಗಿ ಕಾಗೆ ಬಂದು ಕೂತು ಕಾಗೆಯಿಂದಲೇ ಕೊಂಬೆ ಮುರಿದು ಬಿತ್ತು ಎಂಬ ಕಲ್ಪನೆಗೆ ಅವಕಾಶವಾಯಿತೆಂದು ತಿಳಿಯಬೇಕೇ ವಿನಾ ಅನ್ಯಥಾ ಅಲ್ಲ.
- ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು.
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.