Hindi Translationकिन किनका संग क्या क्या नहीं करता?
कीटक भ्रमर नहीं बनता?
चंदन की सन्निधि में परिमल स्पर्श से
नीम, बबूल, खैर सुंगधित नहीं होते?
मम कूडलसंगमेश के शरणों की सन्निधि में
कर्म निर्मल नहीं होता?
Translated by: Banakara K Gowdappa
English Translation There is no telling, by
Whose contact what could be achieved!
Could not a worm become a butterfly?
Must not, before a sandal-tree,
The mere touch of its scent suffuse
The neem, bábul and khair?
That, in the presence of our Lord
KūḍalaSaṅga's Śaraṇas,
Karma will not be cleared?
Translated by: L M A Menezes, S M Angadi
Tamil Translationமெய்யன்பருறவு எதனைச் செய்யாதையனே?
புழு குளவியாகாதோ ஐயனே?
சந்தனத்தருகிலே நறுமணம் பட்டு
வேம்பு, வேல, கருங்காலி மரங்கள் நற்சந்தனமாகாது போமோ?
நம் கூடல சங்கனின் அடியார் அருகிலே
தீவினை நல்வினையாகாது போமோ?
Translated by: Smt. Kalyani Venkataraman, Chennai
Telugu Translationఎవ్వరెవ్వరి కలియక ఏమేమి సేయదయ్యా ?
క్రిమి భ్రమర మైపోవదే అయ్యా
చందన సాన్నిధ్యంబున పరిమళము తాకి
వేప, తంగేడు, చంద్ర(మాకులు పరిమళింపవే
మా సంగని శరణుల సన్నిధిలో
కర్మ నిర్మలమై నిల్వకుండునే?
Translated by: Dr. Badala Ramaiah
ಕನ್ನಡ ವ್ಯಾಖ್ಯಾನಶರಣರ ಸಂಗ ದೀರ್ಘಕಾಲೀನವಾಗಲಿ ಅಲ್ಪಕಾಲೀನವಾಗಲಿ ಸಾಮಾನ್ಯವಲ್ಲ. ಆ ಸಂಗದಿಂದ ಕರ್ಮ ಜೀವನ ಕಳೆದು ಧರ್ಮಜೀವನ ಮೊದಲಿಡುವುದು. ಸತ್ಸಂಗದ ಪ್ರಭಾವ ಅಂತಹುದು.
ತರಿಯ ಮತ್ತು ಚಂದನವೃಕ್ಷಗಳ ಸುತ್ತಲೂ ಬೆಳೆದ ಇತರ ವೃಕ್ಷಗಳು ಬೇವಿನ ಮರದಂತೆ ತಿಕ್ತಮಯವಾಗಿರಲಿ, ಬೊಬ್ಬುಲಿಯಂತೆ ಕಂಟಕಮಯವಾಗಿರಲಿ-ಅವೆಲ್ಲ ಆ ತರಿಯ ಮತ್ತು ಶ್ರೀಗಂಧದ ಸಾನ್ನಿಧ್ಯದಿಂದ ಗಮಗಮಿಸುವವು. ಇದು ದೀರ್ಘಕಾಲೀನ ಸತ್ಸಂಗದ ಸತ್ಪರಿಣಾಮಕ್ಕೆ ಬಸವಣ್ಣನವರು ಕೊಟ್ಟಿರುವ ನಿದರ್ಶನ.
ಇನ್ನು ಅಲ್ಪಕಾಲೀನ ಸತ್ಸಂಗದ ಸತ್ಪರಿಣಾಮಕ್ಕೆ ಅವರು ಕೊಟ್ಟಿರುವ ನಿದರ್ಶನ ಮುಂದಿನಂತಿದೆ : ತೆವಳುವ ಕೀಟ(ಹುಳು)ವು ಹಾರುವ ಕಡಜದ ಸಾನ್ನಿಧ್ಯದಿಂದ ತನ್ನ ಹುಳುಜನ್ಮವನ್ನು ನೀಗಿಕೊಂಡು ರೆಕ್ಕೆ ಪಡೆದುಕೊಂಡು-ತಾನೂ ಆ ಕಡಜದಂತೆ “ವಿಹಂಗಮ”ವಾಗುವುದು.
ಕಡಜದ ಮೊಟ್ಟೆಯೊಡೆದು ತೆವಳುವ ಹುಳುವಾದಾಗ-ಕಡಜವು ಮಣ್ಣಿನ ಗೂಡು ಕಟ್ಟಿ ಅದರಲ್ಲಿ ಆ ಹುಳುವನ್ನಿಟ್ಟು ಮುಚ್ಚುತ್ತದೆ. ಸ್ವಲ್ಪ ಕಾಲದಲ್ಲೇ ಆ ಹುಳು ರೆಕ್ಕೆ ಪಡೆದು ಕಡಜದ ರೂಪವನ್ನೇ ತಳೆದು ಗೂಡನ್ನು ಹೊಡೆದುಕೊಂಡು ಹೊರಬಂದು ಹಾರಿಹೋಗುತ್ತದೆ. ಇಷ್ಟೆಲ್ಲ ಅದ್ಭುತ ಪರಿವರ್ತನೆಯಾಗುವುದು-ಆ ಹುಳುವನ್ನು ಆ ಕಡಜ ಅವಚಿತಂದು ಮಣ್ಣಿನ ಗೂಡಿನಲ್ಲಿಡುವಷ್ಟು ಅಲ್ಪಕಾಲಾವಧಿಯ ಸಂಗದಿಂದ ಮಾತ್ರವೆ.
ಅಂದ ಮೇಲೆ ಕಿಂಚಿತ್ತಾದರೂ ಶರಣಸಂಗವನ್ನು ಮಾಡಿದವನ ಸಂಚಿತ ಕರ್ಮಗಳು ಕ್ಷಯಿಸಿ-ಅವನ ಧರ್ಮಜೀವನ ಊರ್ಧ್ವಮುಖವಾಗುವುದೆಂಬುದು ತಾತ್ಪರ್ಯ.
ವಿ : ಕುಂಡಲಿಗ : ಕಡಜ. ಕೀಡೆ (<ಕೀಟ) : ಕೀಡೇಹುಳ.
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.