Hindi Translationपानी के बुदबुद पर लोहे की पट्टी चढाकर
सुरक्षित रखने का उत्साह देखो
शरीर का भरोसा छोड़कर
महादानी कूडलसंगमदेव की पूजा जीवित रहो ॥
Translated by: Banakara K Gowdappa
English Translation Look at them,
busy, making an iron frame
for a bubble on the water
to make it safe!
Worship the all-giving lord,
and live
without taking on trust
the body's firmness.
Translated by: A K Ramanujan Book Name: Speaking Of Siva Publisher: Penguin Books ----------------------------------
Look at the zeal to make it safe
By putting a band of iron round
This bubble of water! Do not rely
Upon the body, and live on
Adoring our most bountiful
Lord Kūḍala Saṅgama!
Translated by: L M A Menezes, S M Angadi
Tamil Translationநீர்க்குமிழிக்கு இருப்புப் பூண் கட்டிக்
காக்கும் ஊக்கத்தைக் காணாய்
பெருவள்ளல் கூடல சங்கம தேவனை வணங்குவாய்
நிலையற்ற உடலினை, வாழ்வினை நயவாய்.
Translated by: Smt. Kalyani Venkataraman, Chennai
Telugu Translationనీటి బుడగల కినుముతో కట్టలు గట్టి
పదిల మొనరించు సంభ్రమము చూడుమ;
కాయమును నమ్మక దాత కూడల
సంగా సంగమ దేవుని గొలిచి బ్రతుకుమా?
Translated by: Dr. Badala Ramaiah
ಕನ್ನಡ ವ್ಯಾಖ್ಯಾನರಕ್ಷಿಸಿದಷ್ಟೂ ರಭಸವಾಗಿ ಕೆಡುವ ಕೈಕೊಡುವ ಈ ದೇಹವನ್ನು ನೀರ ಮೇಲಣ ಗುಳ್ಳೆಗೆ ಹೋಲಿಸುವರು. ದುಂಡಾಗಿ ಬಣ್ಣಬಣ್ಣವಾಗಿ ಮಿರುಗುವ ಈ ನೀರ್ಗುಳ್ಳೆ ತನ್ನಷ್ಟಕ್ಕೆ ತಾನಿದ್ದರೆ ಕ್ಷಣವಾದರೂ ಕಂಗೊಳಿಸಿ ಅದೃಶ್ಯವಾಗುವುದು. ಅದನ್ನು ಕಬ್ಬಿಣದ ಪೆಟ್ಟಿಗೆಯಲ್ಲಿಟ್ಟು ಹೆಚ್ಚು ಕಾಲ ರಕ್ಷಿಸೋಣವೆಂದು ಕೈಚಾಚಿದರೆ-ನವಿರುಗಾಳಿಗೂ ಬಿರಿಯುವ ಆ ನೀರ್ಗುಳ್ಳೆ-ಚಾಚಿದ ನಮ್ಮ ಆ ಕೈಯ ತಾಪಕ್ಕೇ ಸಿಡಿದು ಮತ್ತಷ್ಟು ಜಾಗ್ರತೆ ಅದೃಶ್ಯವಾಗುವುದು. ಹಾಗೆಯೇ ಕ್ಷಣಭಂಗುರವಾದ ಈ ನಮ್ಮ ದೇಹ ಕೂಡ.
ಅದನ್ನು ದೈವಚಿತ್ತಕ್ಕೆ ಬಿಡದೆ-ಕಾಮದ ರಭಸಕ್ಕೆ ಸಿಲುಕಿಸಿ ಉದ್ವೇಗದ ತೆಕ್ಕೆಗೆ ಬೀಳಿಸಿದರೆ ಅದು ಹೆಚ್ಚು ದಿನ ಬಾಳಿಕೆ ಬರುವುದಿಲ್ಲ. ಈ ದೇಹವನ್ನು ಕುರಿತಂತೆ ಹಠಯೋಗಿಗಳೂ ತೀರ ಅವಾಸ್ತವವಾಗಿ ಪರಿಭಾವಿಸುತ್ತಿರುವರು. ಕ್ಷಣಭಂಗುರವಾದ ಈ ದೇಹವನ್ನು ಮೃತ್ಯುವಿಂದ ಪಾರುಮಾಡಲು ಸಾಧ್ಯವೇ ಇಲ್ಲ.
ಈ ದೇಹವಿರುವಷ್ಟು ಕಾಲದಲ್ಲೇ ದೇವರನ್ನು ನಾವು ನಚ್ಚಿ ಪೂಜಿಸಿದ್ದೇ ಆದರೆ-ಈ ಬದುಕನ್ನಷ್ಟೇ ಅಲ್ಲ-ಈ ಬದುಕಿನಾಚೆಯ ಬದುಕನ್ನೂ ಬದುಕುತ್ತೇವೆ. ಅದೇ ಶಾಶ್ವತದ ಬದುಕು ಕೂಡ-ಎಂದು ಬಸವಣ್ಣನವರು ಬುದ್ಧಿ ಹೇಳುತ್ತಿರುವರು.
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.