Hindi Translationशकट भर बिल्व लाकर
जहाँ देखों वहाँ अभिषेक करते हो;
तापत्रय से मुक्त हो पूजा करो
तापत्रय लिंगदेव नहीं चाहते
कूडलसंगमदेव केवल जल से आर्द्र होंगे?
Translated by: Banakara K Gowdappa
English Translation You bring carts full of bilwa leaves,
Pour water for the bath
Wherever you please.
If you must worship, wipe
The triple pain
Which Liṅga hates.
Lord Kūḍala Saṅgama
Does not grow soft
With a mere water bath!
Translated by: L M A Menezes, S M Angadi
Tamil Translationவண்டி நிரம்ப வில்வம் தந்து, காணுமிடமெலாந்
திருமஞ்சனம் செய்வீர்,
இன்னலைக் களைந்து தொழுவீர்,
இன்னலைச் சிவன் நயவான்
கூடல சங்கம தேவன் வரிதே நீரினால் நனைவனோ?
Translated by: Smt. Kalyani Venkataraman, Chennai
Telugu Translationబండినిండ పత్తిరి కొనిదెచ్చి
చూచినకడ యెల్లా అభిషేకము సేతురె;
తాపత్రయము విడిచి కొల్వుడో!
తాపత్రయ మొల్లదు లింగము
కూడల సంగమ దేవుడు
జలమాత్రమున నానునే?
Translated by: Dr. Badala Ramaiah
Urdu TranslationTranslated by: Hameed Almas
ಸ್ಥಲ -
ಭಕ್ತನ ಜ್ಞಾನಿಸ್ಥಲವಿಷಯ -
ಲಿಂಗನಿಷ್ಠೆ
ಶಬ್ದಾರ್ಥಗಳುಉದಕ = ನೀರು; ತಾಪತ್ರಯ = ಮೂರು ಬಗೆಯ ತಾಪ(ಕಾಯ, ಮನ, ಮಾತಿನಲ್ಲಿ ಉಂಟಾಗುವ ತಾಪ); ಮಜ್ಜನ = ಸ್ನಾನ;
ಕನ್ನಡ ವ್ಯಾಖ್ಯಾನಶಿವಲಿಂಗಕ್ಕೆ ಪೂಜೆ ಮಾಡಲೆಂದು ಹೋದಹೋದಲ್ಲಿ ಬಂಡಿಗಳಲ್ಲಿ ನೀರನ್ನೂ ಬಿಲ್ವಪತ್ರೆಯನ್ನು ಹೇರಿಕೊಂಡು ಹೋಗಿ-ಅಲ್ಲಲ್ಲಿ ಲಿಂಗಕ್ಕೆ ಧಾರೆಧಾರೆಯಾಗಿ ನೀರನ್ನು ಎರೆದು, ಇಂಡೆಇಂಡೆಯಾಗಿ ಪತ್ರೆಯನ್ನು ಏರಿಸುವರು. ಅದರಿಂದ ಶಿವಲಿಂಗಕ್ಕೆ ತಂಪೆನಿಸುವುದೇನು ? ನಮ್ಮಲ್ಲಿರುವ ತಾಪತ್ರಯಗಳ ಬೇಗೆ ತಾಗಿ ನಮ್ಮ ಕೈಯಲ್ಲೇ ಸಿಕ್ಕಿಬಿದ್ದಂತಿರುವ ಆ ಶಿವಲಿಂಗನು ಪರಿತಪಿಸುವನು. ಅದು ಪೂಜೆಯಾಗದೆ ಅಣಕವಾಗುವುದು. ಆದ್ದರಿಂದ ಶಿವನು (ನಮ್ಮನ್ನು) ನೆನೆಯಬೇಕಾದರೆ-ನಾವು ನಮ್ಮ ತಾಪತ್ರಯಗಳನ್ನು ಬಿಟ್ಟು ಪೂಜಿಸಬೇಕು-ಎನ್ನುವರು ಬಸವಣ್ಣನವರು.
ತಾಪತ್ರಯವೆಂಬಲ್ಲಿ “ಪತ್ರೆ”ಯವೆಂಬ ಶ್ಲೇಷೆಯಾಗುವುದನ್ನು ಗಮನಿಸಿ-ಈ ವಿಧವಾದ ಶ್ಲೇಷೆಗೆ 62ನೇ ವಚನವನ್ನು ನೋಡಿ : ಅಲ್ಲಿ ಇವನಾರವ ಎಂಬಲ್ಲಿ ಹಾರವ ಎಂಬ ಶ್ಲೇಷೆಯಿದೆ-ಇದು ಪದಶ್ಲೇಷೆ.
ತಾಪತ್ರಯಗಳು ಆಧಿದೈವಿಕ-ಆಧಿಭೌತಿಕ-ಆಧ್ಯಾತ್ಮಿಕ ಎಂದು ಮೂರು ಬಗೆ : ದೈವನಿಯಾಮಕವಾಗಿ ಬರುವ ಹಸಿವು ತೃಷೆ ಮುಪ್ಪು ಸಾವು ಮುಂತಾದವುಗಳಿಂದ ಉಂಟಾಗುವ ದುಃಖ ಆಧಿದೈವಿಕ.ಪಾಂಚ ಭೌತಿಕವಾಗಿ ಬರುವ ಚಳಿ ಸೆಖೆ ಮುಂತಾದವುಗಳಿಂದ ಉಂಟಾಗುವ ದುಃಖ ಆಧಿಭೌಧಿಕ. ತನ್ನ ದೇಹ ಮನಸ್ಸುಗಳೇ ಮೂಲವಾಗಿಬರುವ ರೋಗರುಜಿನಗಳಿಂದ ಮತ್ತು ಮದಮತ್ಸರಾದಿಗಳಿಂದ ಉಂಟಾಗುವ ದುಃಖ ಆಧ್ಯಾತ್ಮಿಕ.
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.