ಹಲವು ಮಣಿಯ ಕಟ್ಟಿ ಕುಣಿಕುಣಿದಾಡಿ,
ಹಲವು ಪರಿಯಲಿ ವಿಭೂತಿಯ ಹೂಸಿ,
ಗಣಾಡಂಬರದ ನಡುವೆ ನಲಿನಲಿದಾಡಿ,
ಉಂಡು, ತಾಂಬೂಲಗೊಂಡು ಹೋಹುದಲ್ಲಾ!
ತನು-ಮನ-ಧನವ ಸಮರ್ಪಿಸದವರ
ಕೂಡಲಸಂಗಮದೇವರೆಂತೊಲಿವನಯ್ಯಾ?
Hindi Translationकई मणियाँ बाँध नृत्य करना
विविध रीति से विभूति लगाना
गणसमूह मध्य आमोद प्रमोद करना-
भोजन कर तांबूल चबाते जाना नहीं है
तन – मन –धन समर्पित नहीं करनेवालों पर
कूडलसंगमदेव कैसे प्रसन्न होंगे ?
Translated by: Banakara K Gowdappa
English Translation To string a number of beads,
To leap and play,
To smear the ash in many a way,
The sport among the pageant of saints,
To eat, to chew tāmbūla -well,
It's not all there is!
How can Lord Kūḍala Saṅgama
Love them that have not offered yet
The body, mind and wealth?
Translated by: L M A Menezes, S M Angadi
Tamil Translationபற்பல கண்மணிகளைப் புனைந்து கூத்தாடி
பல்வகையிலே திருநீற்றினைப் பூசி,
பகட்டினர் நடுவே மகிழ்ந்திருந்து
உண்டு, தாம்பூலம் கொண்டு செல்வதோ!
உடல், மனம் பொருளை ஈயோர்க்குக்
கூடல சங்கம தேவன் எங்ஙன மருள்வான்?
Translated by: Smt. Kalyani Venkataraman, Chennai
Telugu Translationపలు రుద్రాక్షలు గట్టి తైతకలాడి;
మాటిమాటికి విభూతి పూసి
గణంబుల మధ్య గంతులు వైచి
తిని తాంబూలము గొనిపోవుట గాదయ్యా,
తనుమన ధనముల ధారవోయకే
సంగమదేవుడు మెచ్చడయ్యా నిను.
Translated by: Dr. Badala Ramaiah
ಕನ್ನಡ ವ್ಯಾಖ್ಯಾನಗಣಾಡಂಬರವೆಂದರೆ-ಆಡಂಬರವೆಂಬ ಚರ್ಮವಾದ್ಯದ ತಾಳಗತಿಗೆ ಕುಣಿಯುವ ಭಕ್ತರ ತಂಡದ ಒಂದು ಕುಣಿತ. ಅಲ್ಲಿ ಕುಣಿಯುವವರು ಶಿವಭಕ್ತರೇ ಆಗಿ-ರುದ್ರಾಕ್ಷಿಯನ್ನು ತಲೆ ಕಿವಿ ಕೊರಳು ತೋಳುಮಣಿಕಟ್ಟು ಮುಂತಾದೆಡೆಗಳಲ್ಲಿ-ಕಿರೀಟಾಕಾರವಾಗಿ ಕುಂಡಲಾಕಾರವಾಗಿ ಹಾರಾಕಾರವಾಗಿ ಬಂದಿಯಾಕಾರವಾಗಿ ಬಳೆಯಾಕಾರವಾಗಿ ಅಲಂಕಾರವಾಗಿ ಧರಿಸಿಕೊಂಡು, ಮೈಗೆಲ್ಲಾ ಭಸ್ಮೋದ್ಧೂಳನ ಮಾಡಿಕೊಂಡು, ಆ ಭಸ್ಮವನ್ನೇ ನೀರಿನಲ್ಲಿ ಕಲಸಿ ಅಡ್ಡ ತ್ರಿಪುಂಡ್ರವಾಗಿ ಹಣೆ ಕೊರಳು ಭುಜ ಬೆನ್ನು ಮುಂತಾದೆಡೆ ಮಂದವಾಗಿ ಎಳೆದುಕೊಂಡು-ಆಡಂಬರವಾದ್ಯವನ್ನು ಹಿಡಿದು ಬಾರಿಸುತ್ತ ಗಣಂಗಳ ನಡುವೆ ಕುಣಿದು, ಕುಣಿದಾದ ಮೇಲೆ ನಲಿದು ಹರಗಣ ಪಂಕ್ತಿಯಲ್ಲಿ ಮಂಡಿಸಿ ಉಂಡು ತಾಂಬೂಲ ಜಗಿಯುತ್ತ ಪಿಚ್ಚನೆ ಉಗುಳುತ್ತ ಡರ್ರನೆ ತೇಗುತ್ತ-ಮನೆಗೋ ಮರದ ನೆರಳಿಗೋ ಗುಡಿಗೋ ಚಾವಡಿಗೋ ಹೋಗಿ ಮಲಗಿ ಗೊರಕೆ ಹೊಡೆಯುವುದೇನು ಕಷ್ಟ ? ಅದು ಭಕ್ತಿಯಲ್ಲ-ಇನ್ನೊಬ್ಬರ ವೆಚ್ಚದಲ್ಲಿ ಆರಾಮಜೀವನ ನಡೆಸುವುದು ಭಕ್ತಿಯಲ್ಲ. ದುಡಿಮೆಯಿಂದ ದೇಹವನ್ನು ಬಲಪಡಿಸಿಕೊಂಡು, ಮನವನ್ನು ದೃಢಪಡಿಸಿಕೊಂಡು, ಧನವನ್ನು ಸಂಪಾದಿಸಿಕೊಂಡು-ಆ ತನು ಮನ ಧನ ಮೂರನ್ನೂ ಶಿವಾರ್ಪಣಬುದ್ಧಿಯಿಂದ ಶಿವಭಕ್ತರಿಗೆ ವಿನಿಯೋಗಿಸಬೇಕು. ಹಾಗಲ್ಲದೆ ಅಮಲೇರಿದ ಭಕ್ತಿಗೆ ವಿಮಲಶಿವನು ಒಲಿವನಾದರು ಹೇಗೆ ?
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.