Hindi Translationदेखो, पापपुण्य तुम्हारी इच्छा से है-,
‘जी’ कहना स्वर्ग है ‘रे’ कहना नरक।
देव और भक्त की जय हो, प्रभो इन बातों से
कैलास प्राप्त होता है, कूडलसंगमदेव ॥
Translated by: Banakara K Gowdappa
English Translation Mark you, virtue and sin
Are your own choice;
To say 'Sir' is heaven;
To say 'you there!' is Hell..
O Kūḍala Saṅgama Lord,
In saying 'God', and 'Saint'
And 'bless you, Master' - here
Is Kailāsa !
Translated by: L M A Menezes, S M Angadi
Tamil Translationநல்வினை, தீவினை என்பது நம் விருப்பம் காணீர்!
“அய்யா” எனின் மேலுலகம் “அடா” எனின் கீழுலகம்
தேவன், பக்தன் செயன் சீயன் எனும் சொற்களிலே
கைலாசமிலையோ கூடல சங்கம தேவனே!
Translated by: Smt. Kalyani Venkataraman, Chennai
Urdu Translationیہ جان لوکہ ہے نیکی بد ی تمھارے ہاتھ
مثالِ سایۂ جنّت ہےانکسارکا لفظ
کٹھور پن ہے جہنم کی تیز دھوپ کی طرح
ہمارے شیوکو بھگتوں کے شیو کو یاد کرو
اِنھی کے ذکرسے کیلاش ملنے والا ہے
مرےعزیزمرے دیوا کوڈلا سنگم
Translated by: Hameed Almas
ಸ್ಥಲ -
ಭಕ್ತನ ಜ್ಞಾನಿಸ್ಥಲವಿಷಯ -
ಸ್ವರ್ಗ-ನರಕ
ಶಬ್ದಾರ್ಥಗಳುಜೀಯಾ = ವಿನಯದಿಂದ ಹೇಳುವ ಪದ; ನರಕ = ಅತಿಯಾದ ಕಷ್ಟ;
ಕನ್ನಡ ವ್ಯಾಖ್ಯಾನಉತ್ತಮಾಧಮ ನಡೆನುಡಿಗಳಲ್ಲಿಯೇ ಸ್ವರ್ಗ-ನರಕಗಳು
ಈ ಹಿಂದೆಯೇ ನೋಡಿರುವಂತೆ ಸ್ವರ್ಗ-ನರಕಗಳ, ಪುಣ್ಯ-ಪಾಪಗಳ ಬಗ್ಗೆ ಬಸವಣ್ಣನವರಿಗಿರುವ ಕಲ್ಪನೆಯೇ ಬೇರೆ. ಅದು ಎಷ್ಟು ಸರಳವೋ ಅಷ್ಟೇ ಸೂಕ್ಷ್ಮವೂ ಹೌದು. ಯಜ್ಞಯಾಗಾದಿಗಳನ್ನು ಮಾಡುವುದರಿಂದ ಪುಣ್ಯ ಉಂಟಾಗುತ್ತದೆ, ಅದರಿಂದ ತಮ್ಮ ಮರಣಾನಂತರ ಸ್ವರ್ಗ ದೊರೆಯುತ್ತದೆಯೆಂದು ಹೇಳಿದರೆ ಬಸವಣ್ಣನವರು ಮಾನವನು ಮಾನವನ್ನು ಪ್ರೀತಿಸುವಲ್ಲಿಯೇ ‘ಅಯ್ಯಾ’ಎಂಬ ಒಂದು ಒಳ್ಳೆಯನುಡಿಯಿಂದ ಇತರ ಮಾನವನನ್ನು ಗೌರವದಿಂದ ಕಾಣುವಡೆಯಲ್ಲಿಯೇ ಸ್ವರ್ಗವಿದೆಯೆಂದು ಹೇಳುತ್ತಾರೆ. ಪ್ರಾಣಿ ಹತ್ಯೆಯಿಂದ ಪಾಪವುಂಟಾಗಿ ಮರಣಾನಂತರ ನರಕ ಪ್ರಾಪ್ತಿಯಾಗುವುದೆಂದು ಕೆಲವರು ಹೇಳಿದರೆ ಆ ರೀತಿಯ ಕ್ರೂರ ಹಿಂಸೆಯ ಮಾತಿರಲಿ ಅದಕ್ಕಿಂತಲೂ ಸೂಕ್ಷ್ಮವಾಗಿ ಮಾನವನು ಮಾನವನನ್ನು ಪ್ರೀತಿಸದೆ ದ್ವೇಷಿಸುವಲ್ಲಿಯೇ ಎಲವೋ ಎಂದು ಅನಾದರದಿಂದ ಕಾಣುವಡೆಯಲ್ಲಿ ಯೇ ನರಕವಿದೆಯೆನ್ನುತ್ತಾರೆ. ದೇವಾ, ಭಕ್ತ, ಜೀಯಾ ಇತ್ಯಾದಿ ಮೃದು ನುಡಿಗಳಲ್ಲಿಯೇ ಕೈಲಾಸವಿದೆಯೆನ್ನುತ್ತಾರೆ ಆದ್ದರಿಂದ ಸ್ವರ್ಗವನ್ನಾಗಲೀ, ನರಕವನ್ನಾಗಲೀ ವ್ಯಕ್ತಿಯು ತನ್ನ ಆಚಾರಗಳಿಂದ ಸೃಷ್ಟಿಸಿಕೊಳ್ಳುತ್ತಾನೆಯೇ ಹೊರತು ಅವು ಬೇರೆಲ್ಲೂ ಇಲ್ಲ. ಒಟ್ಟಿನಲ್ಲಿ ಹೇಳುವುದಾದರೆ ಸಮಾಜಕ್ಕೆ ಅಹಿತಕಾರಿಯಾದುದು ನರಕ ಜೀವನವು, ಸಮಾಜಕ್ಕೆ ಹಿತಕಾರಿಯಾದುದು ಯಾವುದೋ ಅದು ಸ್ವರ್ಗ ಜೀವನವು.
- ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು.
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.