Hindi Translationक्षुधा नहीं मिटती, चिंता नहीं छूटती,
आशा नहीं मिटती, व्यवहार नहीं घटता,
स्वामी, मैं अभिषेक करता हूँ,काय- विकारी हूँ
अभिषेक करता हूँ, जीवविकारी हूँ-,
अभिषेक करता हूँ,मैं न शरण हूँ, न लिंगैक्य,
कूडलसंगमदेव में मैं पिशाच हूँ ॥
Translated by: Banakara K Gowdappa
English Translation My hunger will not cease,
Nor will my lust forsake;
Attachments still pursue,
And distractions of the world.
I pour out the bath:
My body still is foul.
I pour out the bath:
My soul is still defiled.
I pour out the bath:
I'm not a Śaraṇa ,
No Liṅgaikya I!
In Lord Kūḍala Saṅgama,
I'm but gnome, good sir !
Translated by: L M A Menezes, S M Angadi
Tamil Translationபசி குறையாது, அல்லல் விடாது,
அவா விடாது, புலனின்பம் விடாது
திருமஞ்சனம் செய்வேனையனே, உடல் விகற்பினன் யான்,
திருமஞ்சனம் செய்வேனையனே, மனவிகற்பினன் யான்
திருமஞ்சனம் செய்வேனையனே, அடியானல்ல, இலிங்க ஒன்றியனன்று
கூடல சங்கம தேவரிடத்திலே
அந்தர பெந்தரமெனும் பூதகணம் யான் ஐயனே.
Translated by: Smt. Kalyani Venkataraman, Chennai
ಕನ್ನಡ ವ್ಯಾಖ್ಯಾನಉಣ್ಣುವ ತಿನ್ನುವ ಆತುರ ಕಡಿಮೆಯಾಗಲಿಲ್ಲ-ಕಾಯವಿಕಾರಿ ನಾನು, ದುಶ್ಚಟಗಳನ್ನು ಬಿಡಲಿಲ್ಲ-ಮನೋವಿಕಾರಿ ನಾನು, ಕಾಮಕ್ರೋಧ ತಗ್ಗಲಿಲ್ಲ ಜೀವವಿಕಾರಿ ನಾನು. ಆದರೂ ದೇವರಿಗೆ ಅಭಿಷೇಕ ಮಾಡಿ ಪೂಜಿಸುತ್ತಿರುವೆನೆಂಬುದೊಂದು ವಿಪರ್ಯಾಸ. ಹೀಗೆ ತನ್ನ ತನು-ಮನ-ಜೀವವಿಕಾರಗಳನ್ನೇ ತೊಳೆದು ಕಳೆಯಲಾರದವನು ದೇವರನ್ನೇ ತೊಳೆದು ಅಲಂಕಾರಮಾಡು(ಪೂಜೆಮಾಡು)ತ್ತಾನೆಂದರೆ ವಿಪರ್ಯಾಸವಲ್ಲದೆ ಮತ್ತೇನು ? ಎಂದು ಬಸವಣ್ಣನವರು ತಮ್ಮ ದೈನಂದಿನ ಆಶನ-ವ್ಯಸನ ವೈಪರೀತ್ಯಗಳು ಹೇಗೆ ತಮ್ಮನ್ನು ಅತ್ತ ಶರಣನಾಗಲೂ ಬಿಡದೆ,ಇತ್ತ ಲಿಂಗೈಕ್ಯನಾಗಲೂ ಬಿಡದೆ ಅಂತರಪಿಶಾಚಿಯನ್ನಾಗಿ ಮಾಡಿವೆಯೆಂದು ಪರಿತಪಿಸುತ್ತಿರುವರು.
ಒಬ್ಬನು ಶರಣನಾದರೆ ಮನಃಪೂರ್ವಕವಾಗಿ ಮಜ್ಜನಕ್ಕೆರೆದು ಪೂಜಾದಿಮಾರ್ಗಕ್ರಿಯೆಗಳಲ್ಲಿ ತೊಡಗಿರುವನು. ಲಿಂಗೈಕ್ಯನಾದರೆ ಪೂಜಾದಿಕ್ರಿಯೆಗಳನ್ನು ಮೀರಿ ಅತೀತಸ್ಥಿತಿಯಲ್ಲಿರುವನು. ಆದರೆ ವಿಕಾರವಶಗತನಾದವನು ಅತ್ತ ಪೂಜೆ ಮಾಡಿದಂತೆಯೂ ಆಗದೆ, ಇತ್ತ ಪೂಜೆಯನ್ನು ಮೀರಿದಂತೆಯೂ ಆಗದೆ-ಎಲ್ಲವೂ ಔಪಚಾರಿಕವಾಗಿ ಆರ್ಥಹೀನವಾಗಿ ಅಂತರಬೆಂತರವಾಗುವುದೆಂಬುದರ್ಥ.
ವಿ : ಅಂತರಬೆಂತರ : ಇತ್ತ ಬದುಕಿ ಮನುಷ್ಯನೂ ಆಗದೆ, ಅತ್ತ ಸತ್ತುಪರಲೋಕ ವಾಸಿಯೂ ಆಗದೆ ಇರುವ ಭೂತಪ್ರೇತ. ಆರತವೆಂದರೆ ಕಾಮ, ನೋಡಿ ವಚನ 132. ಲಿಂಗೈಕ್ಯನೆಂದರೆ ಜೀವನ್ಮುಕ್ತ, ನೋಡಿ ವಚನ 894, ಮತ್ತು ಶಿ.ಶಿ.ಬಸವನಾಳರ ಸಂಪಾದನೆಯ 838 ನೇ ವಚನ.
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.