Hindi Translationकामधेनु के पास रहते
मैं औरों से माँग नहीं सकता ।
तव पूजा से भव-बंधन क्यों नहीं छूटता?
पूर्व जन्मों के चिह्न तक
तव पूजा कर क्या करूँगा?
कूडलसंगमदेव, ऐसी कृपा करो जिससे
मेरे मन के अवगुण दूर हों और तव शरणों को ‘शरणु’ कह सकूँ ॥
Translated by: Banakara K Gowdappa
English Translation I cannot beg of others, when
The Cow Celestial is with you...
When I have worshipped you,
Why shouldn't it break-this bond of birth?
What use to worship you, unless
The signs of bygone births have ceased?
Root out the vices of my heart,
And let me, from your grace,
Say Hail O hail!
To your Śaraṇās O Lord
Kūḍala Saṅgama !
Translated by: L M A Menezes, S M Angadi
Tamil Translationகாமதேனு உமைச்சார்தர, பிறரை வேண்டேனையனே,
உம்மைத் தொழுது, பிறவிக்கட்டு நீங்காததேனையனே?
முற்பிறவிச் சின்னம் நீங்காதிருக்க
உம்மைத் தொழுதென் செய்வேனையனே?
என் மனத்தின் தீயியல்பையகற்றி,
உன் அடியார்க்குத் தஞ்சமென்பற்கு அருளாய்
கூடல சங்கம தேவனே.
Translated by: Smt. Kalyani Venkataraman, Chennai
Telugu Translationకామధేనువు చెంతనుండ
పరుల గింజ నేలయ్యా
భక్తిని పూజింపని భవబంధమేటికో విడదయ్యా
తొలిజన్మపు మచ్చ తొలగనందాక నినుగొల్చి ఫలమేమి?
నా మనః కల్మషము తొలగించి
నీ శరణులకు శరణనుట
కరుణింపుమో సంగమ దేవా!
Translated by: Dr. Badala Ramaiah
ಕನ್ನಡ ವ್ಯಾಖ್ಯಾನಎಲೆ ಶಿವನೆ, ನಾನು ಕೇಳಿದ್ದನ್ನೆಲ್ಲ ಕೊಡುವ ಶಕ್ತಿ ನಿನಗಿರುವಾಗ-ನಾನೇಕೆ ಇನ್ನೊಬ್ಬರನ್ನು ಒಲಿಸಿ ಬೇಡಲಿ? ನಿನ್ನನ್ನೇ ಪ್ರಶ್ನಿಸುತ್ತಿದ್ದೇನೆ-ನಿನ್ನನ್ನು ಪೂಜಿಸಿಯೂ ನನಗೇಕೆ ಭವಬಂಧನ ಬಿಡದಾಗಿದೆ ಹೇಳು ನೋಡೋಣ-ಎನ್ನುತ್ತ ಬಸವಣ್ಣನವರು ತಮ್ಮ ಆ ಪ್ರಶ್ನೆಗೆ ತಾವೇ ಉತ್ತರವನ್ನೂ ಕೊಡುತ್ತಿರುವರು :
ಈ ಭವಬಂಧನ ನನಗಾಗಿರುವುದಕ್ಕೆ ಕಾರಣ-ನನ್ನ ಪೂರ್ವಜನ್ಮದ-ಅಂದರೆ ನಾನು ಬ್ರಾಹ್ಮಣನಾಗಿದ್ದಾಗಿನ ಯಜ್ಞೋಪವೀತ ಚಿಹ್ನವನ್ನು ನಾನಿನ್ನೂ ತ್ಯಜಿಸಲಾಗಿಲ್ಲ, ಮತ್ತು ಆ ಯಜ್ಞೋಪವೀತವನ್ನು ಧರಿಸಿಯೇ ನಿನ್ನನ್ನು(ಶಿವನನ್ನು) ಪೂಜಿಸುವಂತಾಗಿದೆ, ನಾನೇನು ಮಾಡಲಿ ಎಂದು ತಮ್ಮನ್ನು ತಾವೇ ಹಳಿದು ಕೊಳ್ಳುತ್ತಲೂ ಇರುವರು.
ಹೀಗೆ ಬಸವಣ್ಣನವರು ಶಿವಧರ್ಮಪಂಥಕ್ಕೆ ಸೇರಿ ಶಿವೋಪಾಸನೆಗೆ ತೊಡಗಿದ ಮೇಲೂ-ಬ್ರಾಹ್ಮಣಾವರಣದ ತಮ್ಮ ತಂದೆಯ ಮನೆಯಲ್ಲಿ ಆ ಬ್ರಾಹ್ಮಣ್ಯದ ಕುರುಹಾದ ಯಜ್ಞೋಪವೀತ ಸಹಿತವಾಗಿಯೇ ಸ್ವಲ್ಪಕಾಲ ಇದ್ದ ಇಕ್ಕಟ್ಟಿನ ಸಂದರ್ಭವನ್ನು ಕುರಿತಂತಿದೆ ಈ ವಚನ.
ಹರಿಹರನ ಪ್ರಕಾರ ಬಸವಣ್ಣನವರು ತಮ್ಮ ಹದಿನಾರನೇ ವಯಸ್ಸಿನಲ್ಲಿ ಯಜ್ಞೋಪವೀತವನ್ನು ಹರಿದು ಬಿಸುಟು ಬಾಗೇವಾಡಿಯನ್ನು ಬಿಟ್ಟು ಕೂಡಲಸಂಗಮಕ್ಕೆ ಹೋದರೆಂಬುದು ಪ್ರಸಿದ್ಧವೇ ಇದೆ.
ಮತ್ತು ಉಪನಯನವಾದಾಗಲೇ ಜನಿವಾರವನ್ನು ಕಿತ್ತೊಗೆಯಲು ಬಸವಣ್ಣನವರು ಪ್ರಯತ್ನಿಸಿದರೆಂದೂ-ಅವರನ್ನು ಹಿರಿಯರು ತಡೆದರೆಂದೂ-ಆಗ ಬಸವಣ್ಣನವರು ದಾಕ್ಷಿಣ್ಯಕ್ಕೆ ಸಿಕ್ಕಿ ಆ ಜನಿವಾರವನ್ನು ಹರಿದೆಸೆಯದೆ ಸ್ವಲ್ಪಕಾಲ ತಟಸ್ಥರಾಗಿದ್ದರೆಂದೂ ಸಿಂಗಿರಾಜನ ಬಸವ ಪುರಾಣದಲ್ಲಿ ಹೇಳಿರುವುದನ್ನೂ ಇಲ್ಲಿ ನೆನೆಯಬಹುದು.
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.