ಬಸವಣ್ಣ   
Index   ವಚನ - 456    Search  
 
ಕೂಪವರಿಗೆ ಹೇಳುವೆನು ಕುಳಸ್ಥಳಂಗಳೆಲ್ಲವನು; ಕೂರದವರಿಗೆ ಹೇಳಿ ನಾನೇವೆನು ಶಿವನೆ? ಕರಲ ಭೂಮಿಯಲ್ಲಿ ಕರೆಹ ವೃಷ್ಟಿಯ ತೆರನಂತೆ ಅವರೆತ್ತ ಬಲ್ಲರು ಎನ್ನ ಸುಖ-ದುಃಖವ? ಅಂಗತವಿಲ್ಲದ ಸಂಗವು ಅಳಲಿಲ್ಲದ ಹುಯ್ಯಲಂತೆ ಇದು ಕಾರಣ, ಕೂಡಲಸಂಗಮದೇವಾ, ನಿಮ್ಮ ಶರಣರಿಗಲ್ಲದೆ ಬಾಯ್ದೆರೆಯನು.