Hindi Translationसुनो सखी, जो पुरुष मन को मनोहर नहीं
वे मन को भाते नहीं
देखो पन्नगभूषण के आतिरिक्त अन्य पुरुष
मेरे लिए अप्रिय, हैं।
कन्यावस्था का मिलन है,
बाल्यावस्था से सहजीवन है,
तव सौगंध है कूडलसंगमदेव ॥
Translated by: Banakara K Gowdappa
English Translation Listen to me, my friends:
No men but he who charms the heart
Call to my heart;
The love of all men but He, the snake-decked,
I hate, you see!
O Kūḍala Saṅgama Lord, I swear by You:
I joined you when a maiden I was;
We lived together since childhood!
Translated by: L M A Menezes, S M Angadi
Tamil Translationமனம் விரும்பாத கணவர்
மனத்திலே நிற்பதில்லை கேள்அம்மா
நாகத்தை அணிகலனாக அணியாத கணவர்
எனக்கு ஆகாத எல்லை அம்மா காண்அம்மா
சிறுவயதிலரும்பிய அன்பு இளமைக்கால வாழ்வு
உம்மாணை ஐயனே கூடலசங்கமதேவனே.
Translated by: Smt. Kalyani Venkataraman, Chennai
Telugu Translationమదికి మనోహరముగాని మగలు
మనసుకు రారు కదవే?
పన్నగ భూషణులుగాని భర్తలు
నా మదిబట్ట రే చెలీ!
ఏమందునే సఖీ! నా మొఱ లాలింపవే!
కన్నెఱికపు కూటమి పిన్న నాటి బ్రతుకు
సంగమదేవుడే సాక్షి సఖీ!
Translated by: Dr. Badala Ramaiah
ಕನ್ನಡ ವ್ಯಾಖ್ಯಾನಶರಣಸತೀಭಾವದಿಂದ ಬಸವಣ್ಣನವರು ಶಿವಪತಿಯಲ್ಲದೆ ಯಾರೂ ತಮಗೆ ಮನೋಹರವಲ್ಲವೆನ್ನುತ್ತಿರುವರು. ಯಾರ ಮನಸ್ಸಿಗಾಗಲಿ ಘನತೆ ಬರುವುದು ಹೀಗೆ ಒಂದು ಮಹಾಧ್ಯೇಯಕ್ಕೆ ಬದ್ಧವಾದಾಗಲೇ-ಕಳ್ಳಕಾಕರಿಗೆಲ್ಲ ಮನಸೋತಾಗಲಲ್ಲ. ಹಿಂದಿನ ವಚನದಲ್ಲಿ ವರ್ಣಿತವಾಗಿರುವ ದಕ್ಷಿಣಾಮೂರ್ತಿ ಶಿವನೇ ಬಸವಣ್ಣನವರಿಗೆ ಪ್ರಾಣಪ್ರಿಯ. ಮಿಕ್ಕ ಯಾವ ದೇವತೆಯೂ ಶಕ್ತಿಯೂ ಅವರಿಗೆ ಆರಾಧ್ಯವಲ್ಲ.
ತಮಗೂ ಶಿವನಿಗೂ ಇರುವ ಈ ಅನ್ಯೋನ್ಯಬಂಧ ತಾವಿನ್ನೂ ಎಳವೆಯಲ್ಲಿದ್ದಾಗಲೇ ಏರ್ಪಟ್ಟಿತೆಂದು ಅಂದಿನಿಂದಲೂ ಶಿವನೊಡನೆ ತಾವು ದಿವ್ಯಸಂಸಾರ ನಡೆಸುತ್ತ ಬಂದಿರುವುದಾಗಿಯೂ ಅರಿಕೆ ಮಾಡಿಕೊಳ್ಳುತ್ತಿರುವರು.
ಈ ವಚನ ನಿರೂಪಣೆಯ ಹಿನ್ನಲೆಗೆ ಬಾಲ್ಯವಿವಾಹದ ಪ್ರತಿಮೆಯಿದೆ. ಬಸವಣ್ಣನವರು ತಮ್ಮ ಚಿಕ್ಕಂದಿನಲ್ಲೇ ಶಿವಕ್ಕೆ ತೆಕ್ಕೆಬಿದ್ದುದನ್ನು ಈ ಪ್ರತಿಮೆ ಚೊಕ್ಕವಾಗಿ ಮಾರ್ದನಿಸುತ್ತಿರುವುದು. ಈ ವಚನವ್ಯಾಜದಿಂದಲೇ ಬಸವಣ್ಣನವರು ತಮ್ಮ ಬಾಲ್ಯದಲ್ಲೇ ನಡೆದುಹೋದ ತಮ್ಮ ಮದುವೆಯನ್ನು ನೆನೆಯುತ್ತಿರಬಹುದು. ಪಾಲ್ಕುರಿಕೆ ಸೋಮನಾಥನ ಪ್ರಕಾರವಾಗಿಯಾದರೂ ಬಿಜ್ಜಳನ ಭಂಡಾರಿಯಾಗಿದ್ದ ಬಲದೇವನ ಸುಪುತ್ರಿ ಗಂಗಾಬಿಕೆಯನ್ನು ಬಸವಣ್ಣನವರು ಮದುವೆಯಾಗಿದ್ದು ತಮ್ಮ ಏಳನೇ ವಯಸ್ಸಿನಲ್ಲಿಯೇ ಮತ್ತು ಅವರು ಕೂಡಲ ಸಂಗಮಕ್ಕೆ ಹೋಗುವ ಮುನ್ನವೇ. ಮೊರೆ : ಆಶ್ರಯ, ವಂಶ, ಸಂಬಂಧ, ಕುಲವಾಚಿ (ಕೇಶಿರಾಜ-143)
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.