Hindi Translationवेद स्वयंभू कहनेवालों सुनो
देखो भाई, तुम विश्वास करो
कि एको देवः रुद्रो न द्वितीयः
तुम विश्वास करो
श्रुतियाँ घोषणा करती हैं
‘चकितमभिदत्ते’
जगत्कर्ता केवल कूडलसंगमदेव ही है ॥
Translated by: Banakara K Gowdappa
English Translation Listen, O, to the man who claims:
'Veda is self-begot'.
Mark, brothers, you should believe
'One only, Without a second, God';
Ōṁ, God who created heaven and earth
Is the only God!
Mark, brothers, you should believe:
Rudra is the only, without a second, One'.
The Scriptures come proclaiming:
'In wonder they speak of Him'.
Mark, Brothers, Lord
Kūḍala Saṅgama alone
Is creator of the world!
Translated by: L M A Menezes, S M Angadi
Tamil Translation “வேதம் சுயம்பு” எனும் வாதியே, கேட்பாய்
“ஏகோ தேவோ ருத்ரோ ந த்விதீ:”
என்று நம்புவதைக் காணீர்
“சகிதமபிதத்தே” என்று சுருதி உரைக்கிறது
உலகின் இறைவன் கூடல சங்கம தேவன்
ஒருவனே, காணீர், அண்ணன்மீர்
Translated by: Smt. Kalyani Venkataraman, Chennai
ಕನ್ನಡ ವ್ಯಾಖ್ಯಾನಈ ವಚನದ ಮೂಲಕ ಬಸವಣ್ಣನವರು ಮೀಮಾಂಸಕರ ನಿರೀಶ್ವರವಾದ(ಕರ್ಮವಾದ)ವನ್ನು ಖಂಡಿಸಿ-ಸೇಶ್ವರವಾದವನ್ನು ಶಿವನ ಹೆಸರಿನಲ್ಲಿ ಪ್ರತಿಪಾದಿಸುತ್ತಿರುವರು.
ಶ್ರವ್ಯವಾದ ಶಬ್ದಗಳು ಅನಿತ್ಯವಾದುವಾದರೂ-ಅವಕ್ಕೂ ಮೂಲಭೂತವಾದ ಶಬ್ಧ(ದ್ರವ್ಯ)ವನ್ನು ನಿತ್ಯವೆನ್ನುವರು ಮೀಮಾಂಸಕರು. ಅವರ ಪ್ರಕಾರ ಈ ನಿತ್ಯವಾದ ಶಬ್ದಗಳ ಸಮೂಹವೇ ವೇದ. ಈ ವೇದ ತನಗೆ ತಾನೇ ಅನಾದಿಯಿಂದ ಇರುವುದು. ಅದು “ಸ್ವಯಂಭು”. ಹೀಗೆ ಅಪೌರುಷೇಯವಾದ ವೇದವನ್ನು ಪ್ರಾಚೀನ ಮೀಮಾಂಸಕರು ದೇವರ ಸ್ಥಾನದಲ್ಲಿರಿಸಿ-ಅದರಲ್ಲಿ ವಿಧಿಸಲಾಗಿರುವ ಕರ್ಮಗಳನ್ನು ಮಾಡುವುದೇ ಧರ್ಮವೆಂದೂ, ಮಾಡಿಸಿಕೊಂಡ ಆ ಕರ್ಮವೇ ಮಾಡಿದವರಿಗೆ ಉಚಿತಫಲಗಳನ್ನು ಕೊಡುವುದೆಂದೂ-ಈಶ್ವರನೊಬ್ಬನನ್ನು ಇಲ್ಲಗಳೆದಿರುವರು.
ಕಮಾರಿಲನ ಪರಂಪರೆಯ ಈ ಮೀಮಾಂಸಕರ ನಿರೀಶ್ವರವಾದವನ್ನು (ಆ ಮೂಲಕವೇ ವೇದ ಅಪೌರುಷೇಯವೆಂಬ ವಾದವನ್ನೂ) ಬಸವಣ್ಣನವರು ಖಂಡಿಸುತ್ತಿರುವರು-ಅದೇ ವೇದೋಲ್ಲೋಖಗಳ ಮೂಲಕವಾಗಿ: ವಿಶ್ವತಶ್ಚಕ್ಷುರುತ ವಿಶ್ವತೋ ಮುಖೋ ವಿಶ್ವತೋ ಬಾಹುರುತ ವಿಶ್ವತಸ್ಪಾತ್|ಸಂಬಾಹುಭ್ಯಾಂಧಮತಿ ಸಂಪತತ್ರೈರ್ ದ್ಯಾವಾಭೂಮೀ ಜನಯನ್ ದೇವ ಏಕಃ” (ಶ್ವೇತಾಶ್ವತರ 3-3) : ಭೂಮಿ ಆಕಾಶಗಳನ್ನು ಸೃಷ್ಟಿಸಿದ ರುದ್ರಶಿವನು ಒಬ್ಬನೇ-ಎಲ್ಲ ಕಣ್ಣುಗಳೂ ಅವನವೇ, ಎಲ್ಲ ಮುಖಗಳೂ ಅವನವೇ, ಎಲ್ಲ ಕೈಗಳೂ ಅವನವೇ, ಎಲ್ಲ ಪಾದಗಳೂ ಅವನವೇ ಆಗಿವೆ. ಅವನು ತನ್ನ ಎರಡೂ ಬಾಹುಗಳ ತಿದಿಯೊತ್ತಿ ಈ (ಚರಾಚರ) ಜಗದ ಪ್ರಾಣಾಗ್ನಿಯನ್ನು ಪಟುಗೊಳಿಸುತ್ತಿದ್ದಾನೆ ಎಂದು ಮುಂತಾಗಿ.
ಬಸವಣ್ಣನವರು ಇನ್ನಷ್ಟು ಉಗ್ರವಾಗಿ ಮೀಮಾಂಸಕರ ನಿರೀಶ್ವರವಾದವನ್ನು ಖಂಡಿಸಿರುವುದನ್ನು ಕಾಣಬೇಕಾದರೆ ನೋಡಿ ವಚನ 750.
ಈ ವಚನದಲ್ಲಿನ “ಏಕೋ ಹಿ ರುದ್ರೋ” ಎಂಬ ಮತ್ತೊಂದು ಉಲ್ಲೇಖಕ್ಕೆ 529ನೇ ವಚನವನ್ನು ನೋಡಿ. “ಚಕಿತಮಭಿಧತ್ತೇ ಮತ್ತು ಶ್ರುತಿರಪಿ” ಎಂಬುದೆರಡೂ ಒಂದೇ ಉಲ್ಲೇಖ : ಶ್ರುತಿಗಳೂ ಚಕಿತಗೊಂಡು ಹೀಗೆ ಹೇಳುತ್ತವೆಂಬುದರ ಅರ್ಥ.
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.