ವಿಷ್ಣು ಬಲ್ಲಿದನೆಂಬೆನೆ?
ದಶಾವತಾರದಲ್ಲಿ ಭಂಗವಟ್ಟುದಕ್ಕೆ ಕಡೆಯಿಲ್ಲ!
ಬ್ರಹ್ಮ ಬಲ್ಲಿದನೆಂಬೆನೆ?
ಶಿರ ಹೋಗಿ ನಾನಾ ವಿಧಿಯಾದ!
ವೇದ ಬಲ್ಲಿತ್ತೆಂಬೆನೆ?
ನಾನಾ ಮುಖದಲ್ಲಿ ಸ್ತುತಿಯಿಸಿತ್ತಲ್ಲದೆ
ಲಿಂಗದ ನಿಲುಗಡೆಯ ಕಾಣದು!
ಶಾಸ್ತ್ರ ಬಲ್ಲಿತ್ತೆಂಬೆನೆ? ಶಬ್ದಕ್ರಿ!
ಪುರಾಣ ಬಲ್ಲಿತ್ತೆಂಬೆನೆ? ಪೂರ್ವಕ್ರಿ!
ಆಗಮ ಬಲ್ಲಿತ್ತೆಂಬೆನೆ? ವಾಯ ಹೊಂದಿತ್ತು!
ಇದು ಕಾರಣ, ಕೂಡಲಸಂಗಯ್ಯನೇ ನಿತ್ಯ!
ಉಳಿದ ದೈವವೆಲ್ಲ ಅನಿತ್ಯ ಕಾಣಿ, ಭೋ!
Hindi Translationविष्णु को श्रेष्ठ कहूँ?
दशावतारों में भुक्त कष्टों की सीमा नहीं ।
ब्रह्म को श्रेष्ठ कहूँ ?
शिर खोकर नाना कष्ट भोगे ।
वेद श्रेष्ठ कहूँ?
नाना मुख से स्तुति तो की
किंतु लिंग का यथार्थ ज्ञान ना जाना ।
शास्त्र श्रेष्ठ कहूँ? वहाँ शब्दजाल है-।
पुराण श्रेष्ठ कहूँ?
वह प्राचीन गाथा है ।
आगम श्रेष्ठ कहूँ?
वह निरर्थक है;
अतः देखो कूडलसंगमदेव ही नित्य है
शेष देव अनित्य हैं ॥
Translated by: Banakara K Gowdappa
English Translation Shall I say Viṣṇu is great?
But there is no end to his
Humiliations
Right thro’ ten incarnations !
Shall I say Brahma is great ?
But, his head gone,
He underwent a chequared lot !
Shall I say the Veda is great ?
It praised through several mouths,
Yet could not see
The Liṅga’s ultimate height !
Shall I say the Śāstra is great ?
It is but a matter of words!
Shall I say Purāṇa is great ? It is past history! Shall I say Āgama is great ?
It is gone all in vain !
Therefore, do mark ye, sirs:
Lord Kūḍalasaṅga alone
Is timeless, the others no !
Translated by: L M A Menezes, S M Angadi
Tamil Translationதிருமாலை வல்லவன் எனக் கூறுவேனோ?
பத்து அவதாரங்களில் அளவிலா பங்கம் எய்தினன்
பிரம்மனை வல்லவன் எனக்கூறுவேனோ?
தலையகன்று பலவிதிகளுக்கு ஆட்பட்டனன்
வேதம் உயர்ந்தது என்பேனோ?
பலவகைகளில் துதிக்கின்றதே தவிர
இலிங்க நிலை குறித்துக் கூறவில்லை
சாத்திரம் உயர்ந்தது என்பேனோ?
சலசலப்பு நிறைந்தது
புராணம் உயர்ந்தது என்பேனோ?
பண்டைய சடங்குகளை உரைக்குமால்
ஆகமம் உயர்ந்தது என்பேனோ?
பயனற்றவை நிறைந்ததாம்
எனவே கூடல சங்கய்யனே நிலைத்தவன்
எஞ்சிய கடவுளர் நிலையற்றவர், காணீரோ
Translated by: Smt. Kalyani Venkataraman, Chennai
Telugu Translationవిష్ణువు బల్లి దుడందునా? దశావతారముల
పడు భంగములకు పారము లేదు
బ్రహ్మను బలవంతుడందునా
తలతెగి నానా బాధల పాలయ్యె!
వేదము బలమందునా? సలునోళ్ళలోబడి నలిగే
లింగపునిలువుతుది కానదు
శాస్త్రము బలమందునా? అది శబ్దరాశి
పురాణము బలమందునః అది చరిత్ర
ఆగమము బలమందున అది మాయమై పోవు
కాన సంగడే నిత్యుడు
తక్కిన సుర లెల్లా చ్యుతులని తెలియుడో
Translated by: Dr. Badala Ramaiah
ಕನ್ನಡ ವ್ಯಾಖ್ಯಾನಕೂಡಲ ಸಂಗಯ್ಯ(ಶಿವ)ನೊಬ್ಬನೇ ನಿತ್ಯ-ಉಳಿದ ದೈವಗಳೆಲ್ಲ ಅನಿತ್ಯವೆಂಬುದು ಈ ವಚನದ ವಾದ. ಈ ಸಂದರ್ಭದಲ್ಲಿ ವಿಷ್ಣು ಮತ್ತು ಬ್ರಹ್ಮರನ್ನು ಪ್ರಸ್ತಾಪಿಸುವುದು ಸಮಂಜಸವೇ ಆಗಿದೆ. ಆದರೆ ಆ ದೈವಗಳ ಸಾಲಿನಲ್ಲಿ ವೇದ ಶಾಸ್ತ್ರ ಪುರಾಣ ಆಗಮಗಳನ್ನು ದೈವಗಳೆಂಬಂತೆ ಪಟ್ಟಿ ಮಾಡಿರುವುದು ಬಹಳ ಕುತೂಹಲಕಾರಿಯಾಗಿದೆ.
531ನೇ ವಚನದಲ್ಲಿ ಮೀಮಾಂಸಕರು ವೇದವನ್ನು ದೈವದ ಪಟ್ಟಕ್ಕೆ ಏರಿಸಿರುವುದನ್ನು ಕಂಡಿದ್ದೇವೆ-ಅದು ಅಪೌರುಷೇಯ-ಅಂದರೆ ಅದು ತನಗೆ ತಾನೇ ಉದ್ಭವಿಸಿದುದು, ಅನಾದಿ, ಸ್ವಯಂಭು, ಈ ಮಾನ್ಯತೆಯನ್ನು ಶಾಸ್ತ್ರಕ್ಕೆ ಪುರಾಣಕ್ಕೆ ಆಗಮಕ್ಕೆ ಕೊಟ್ಟ ಧಾರ್ಮಿಕ ಪಂಥಗಳು ನಮ್ಮಲ್ಲಿ ಯಾವುದಾದರೂ ಉಂಟೋ?
“ವೈದಿಕವಾದ ಅಥವಾ ತಾಂತ್ರಿಕವಾದ ಯಾವುದೇ ಮಂತ್ರವಾಗಲಿ ಬ್ರಹ್ಮರೂಪಿಯೇ ಆಗಿದೆ. ಈ ಮಂತ್ರಗಳನ್ನು ಒಳಗೊಂಡಿರುವ ವೇದವಾಗಲೀ ತಂತ್ರವಾಗಲಿ ಬ್ರಹ್ಮಸ್ವರೂಪ, ಈ ಭೌತಿಕ ಪ್ರಪಂಚದಲ್ಲಿ ಭಗವಂತನು ರಾಮನಾಗಿಯೋ ಕೃಷ್ಣನಾಗಿಯೋ ಅವತರಿಸುವಂತೆ-ಆಧ್ಯಾತ್ಮಿಕ ಪ್ರಪಂಚದಲ್ಲಿ ಆ ಭಗವಂತನೇ ಸಮಾಧಿಸ್ಥರಾದ ಯೋಗಿಗಳ ಮನಸ್ಸಿನಲ್ಲಿ “ಶಾಸ್ತ್ರ”ವಾಗಿ ಅವತರಿಸುತ್ತಾನೆ. ಹೀಗೆ ಶಾಸ್ತ್ರರೂಪದಲ್ಲಿ ಅವತರಿಸುವ ಭಗವಂತನಿಗೆ “ಶಬ್ದ ಬ್ರಹ್ಮ”ಎನ್ನುವರು. ಈ ಭಗವಂತನು ಶಬ್ದಬ್ರಹ್ಮವಾಗಿ ಅವತರಿಸುವುದು ಸಾಧಕರ ಬಂಧವಿಮೋಚನೆಗಾಗಿಯೇ” (ಸರ್ ಜಾನ್ ಉಡ್ರೋಫನು ತನ್ನ Principles of Tantra ಎಂಬ ಗ್ರಂಥದ 12ನೇ ಅಧ್ಯಾಯದ ಪ್ರಾರಂಭದಲ್ಲಿ).
ಈ ಉಲ್ಲೇಖವನ್ನು ನೋಡಿದರೆ ವೇದ ಶಾಸ್ತ್ರ ಪುರಾಣ ಆಗಮಗಳನ್ನು ದೇವರಂತೆ ಭಾವಿಸುವುದು ಮೀಮಾಂಸಕರಲ್ಲೇ ಅಲ್ಲ ಶಾಕ್ತಾದಿ ಕೆಲವು ಇತರ ಪಂಥಗಳಲ್ಲೂ ರೂಢಿಯಲ್ಲಿತ್ತೆಂದು ಹೇಳಲು ಬರುವುದು.
ಈ ಪಂಥಗಳ ಅನುಸಾರವಾಗಿ ವೇದಾದಿಗ್ರಂಥಗಳನ್ನು ಪರಬ್ರಹ್ಮವೆಂಬಂತೆ ಒಪ್ಪಿಕೊಂಡರೆ ಮಾನವನು ನವೋನವವಾಗಿ ವಿಕಾಸವಾಗುವುದಕ್ಕೆ ಆಸ್ಪದವಿಲ್ಲದೆ-ಹಳೆಯದಕ್ಕೇ ಬದ್ಧನಾಗಿ ಸೃಷ್ಟಿಯಲ್ಲೊಂದು ಪಳೆಯುಳಿಕೆಯಾಗಿ ಜೀವಿಸಬೇಕಾದೀತು. ಆದುದರಿಂದಲೇ ಬಸವಣ್ಣನವರು-ವೇದವೆಲ್ಲಾ ಅನೇಕ ದೇವತೋಪಾಸನೆಯ ಬರೀ ತೊಳಲಿಕೆಯೆಂದೂ, ಶಾಸ್ತ್ರವೆಂಬುದು ಬರೀ ಶಬ್ದಾಡಂಬರವೆಂದೂ, ಪುರಾಣವೆಲ್ಲಾ ಪೂರ್ವಕಾಲದವರ ಕಥೆಗಳ ಸಂಕಲನವೆಂದೂ, ಆಗಮವೆಲ್ಲಾ ಕಾಲಕಾಲಕ್ಕೆ ತೇಪೆ ಹಾಕಿದ ಬಟ್ಟೆಯಂತೆ ವ್ಯರ್ಥವೆಂದೂ ಹೇಳುತ್ತ-ಅವಕ್ಕೆ ಮಹಾದೇವ ಪಟ್ಟವನ್ನಿರಲಿ ದೇವತ್ವವನ್ನೂ ಕೊಡಲಿಚ್ಛಿಸುವುದಿಲ್ಲ.
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.